ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡಿನ ಅಗ್ರಹಾರ ದಾಸರಹಳ್ಳಿಯ ಡಾ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಘಟಕವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಠ್ಯಪುಸ್ತಕಗಳಲ್ಲಿ ಹೆಚ್ಚಾಗಿ ಜಾನಪದ ಗದ್ಯ ಪದ್ಯಗಳನ್ನು ಅಳವಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಜಾನಪದ ಜಾತ್ಯಾತೀತವಾದದ್ದು ಮತ್ತು ಧರ್ಮಾರ್ಥಿತವಾದದ್ದು, ಕೃಷಿ ಸಂಸ್ಕೃತಿಯಿಂದ ಉಗಮವಾಗಿದ್ದು ಇದನ್ನು ಉಳಿಸಿ ಬೆಳೆಸಿದ್ದು ಹೆಚ್ಚು ಮಹಿಳೆಯರು, ದಾಖಲಿಕರಣ ಮತ್ತು ತರಬೇತಿಯ ಮೂಲಕ ಮುಂದಿನ ಪೀಳಿಗೆ ಇದನ್ನು ವರ್ಗಾಯಿಸಬೇಕಾಗಿದೆ ಎಂದು ತಿಳಿಸಿದರು, ಎಲ್ಲಾ ಕಲೆಗಳಿಗೂ ಮೂಲ ಜಾನಪದವಾಗಿದ್ದು. ಇದನ್ನು ಯುವ ಜನರು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಡಾ. ರಿಯಾಜ್ ಪಾಷಾ ರವರು ಮಾತನಾಡಿ ಕನ್ನಡ ಜಾನಪದ ಸಂಸ್ಕೃತಿಯ ಭಾಗವಾದ ಜಾನಪದ ಕಲೆ ಮತ್ತು ಜಾನಪದ ಕಲಾವಿದರು ಕನ್ನಡನಾಡಿನ ಅಸ್ಮಿತೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಸೊಬಗಿನಿಂದ ದೂರಾಗುತ್ತಿದ್ದಾರೆ. ಇದು ಸರಿಯಲ್ಲ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಪರಿಚಯಿಸಲು ಯುವ ಜನರು ದೇಸಿ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜಾನಪದ ಕಲೆ ಮತ್ತು ಸಂಸ್ಕೃತಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿ ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಮತ್ತೇ ಜಾನಪದ ಸಂಸ್ಕೃತಿ ಈ ನೆಲದ ಮೂಲ ನಿವಾಸಿಗಳ ಅಸ್ಮಿತೆಯಾಗಿದ್ದು, ದುಡಿಯುವ ವರ್ಗ ತಮ್ಮ ಮೈ ನೋವನ್ನು ಮರೆಯಲು ಉಳಿಸಿ ಬೆಳೆಸಿಕೊಂಡ ಜಾನಪದ ನಮ್ಮ ಮೂಲ ಸಂಸ್ಕೃತಿಯಾಗಿದೆ.
ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಬಿಂಬಿಸುವ ಜನಪದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದರ ಮೂಲಕ ಉಳಿಸಿ ಬೆಳೆಸಬೇಕು ಹಾಗೂ ರಾಜ್ಯಾಧ್ಯಕ್ಷರಾದ ಬಾಲಾಜಿ ರವರ ಆದೇಶದಂತೆ ಮುಂದಿನ ಡಿಸೆಂಬರ್ ತಿಂಗಳಲ್ಲಿ ನಡೆಯುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಪ್ರಪ್ರಥಮ ಸಮ್ಮೇಳನವನ್ನು ಶಾಸಕರಾದ ಪ್ರಿಯಕಷ್ಣರವರ ಅಧ್ಯಕ್ಷತೆಯಲ್ಲಿ ಅದ್ದೂರಿ ಸಮಾರಂಭ ಮಾಡಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ವೀಣಾ ವಾದಕಿ ಹಾಗೂ ಇಂದು ಸಂಜೆ ಪತ್ರಿಕೆಯ ಸಂಪಾದಕಿ ಶ್ರೀಮತಿ ಪದ್ಮ ನಾಗರಾಜ್ ಮಾತನಾಡಿ ಜಾನಪದ ಸೊಗಡು ಗ್ರಾಮೀಣ ಹಾಗೂ ಬುಡಕಟ್ಟು ಭಾಗಗಳಲ್ಲಿ ಜೀವಂತವಾಗಿದ್ದು. ಗ್ರಾಮೀಣ ಭಾಗದಲ್ಲಿ, ಗ್ರಾಮೀಣ ಭಾಗದ ಮತ್ತು ಬುಡಕಟ್ಟು ಜನರಲ್ಲಿ ಶುದ್ದ ಜನಪದ, ಸಂಸ್ಕೃತಿ, ಜಾನಪದ ಗೀತೆಗಳು, ಆಟ-ಪದಗಳು ಹಾಸುಹೊಕ್ಕಾಗಿವೆ.
ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಕನ್ನಡ ಜಾನಪದ ಪರಿಷತ್ತಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ರ. ನರಸಿಂಹಮೂರ್ತಿ ರವರು ಹೆಚ್ಚು ಕ್ರಿಯಾಶೀಲ ವ್ಯಕ್ತಿತ್ವವುಳವರು. ಅತ್ಯಂತ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಬಾಲಾಜಿ ರವರಿಗೆ ವಂದನೆಗಳನ್ನು ತಿಳಿಸಿದರು.
ಇದೇ ವೇಳೆ ಜಾನಪದ ದಿಗ್ಗಜರಾದ ಗುರುರಾಜ ಹೊಸಕೋಟೆ, ಏಕತಾರಿ ರಾಮಯ್ಯ, ಜೋಗಿಲ ಸಿದ್ದರಾಜು ಹಾಗೂ ಸಂತವಾಣಿ ಸುಧಾಕರ್ ರವರನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತು ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಸನ್ಮಾನಿತರಲ್ಲಿ ಜಾನಪದ ಜೋಗಿ ಗುರುರಾಜ ಹೊಸಕೋಟೆ ಮಾತನಾಡಿ ಜಾನಪದ ಗ್ರಾಮೀಣ ಭಾಗದ ಜೊತೆಗೆ ನಗರದಲ್ಲಿಯೂ ಸಹ ಕನ್ನಡ ಜಾನಪದ ಪರಿಷತ್ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಮುನ್ನ ಖ್ಯಾತ ಜಾನಪದ ಗಾಯಕರಾದ ಗುರುರಾಜ್ ಹೊಸಕೋಟೆ, ಏಕತಾರಿ ರಾಮಯ್ಯ, ಜೋಗಿಲ ಸಿದ್ದರಾಜು, ಸಂತವಾಣಿ ಸುಧಾಕರ್, ಲಕ್ಷ್ಮಣ ನೆಲಸೊಗಡು, ಕುಮಾರಿ ಮನ್ವಿತ ಸುದೀರ್, ಮಹದೇವ ಸ್ವಾಮಿ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಲಕ್ಷ್ಮಣ್ ನೆಲಸೊಗಡು ಮತ್ತು ತಂಡದಿಂದ ಡೊಳ್ಳು ಕುಣಿತ ಮತ್ತು ಯಕ್ಷಗಾನ ಪ್ರದರ್ಶನ ನೀಡಿದರು.ಚೈತ್ರ ಸಂದೇಶ್ ಸ್ಟಡಿ ಸೆಂಟರ್ ನ ಮಕ್ಕಳು ಜಾನಪದ ಹಾಡಿಗೆ ನೃತ್ಯ ಪ್ರದರ್ಶನ ನೀಡಿದರು. ಅಶ್ವಥ್ ನಾರಾಯಣ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಾದ್ಯ ಸಹಕಾರವನ್ನು ತಬಲಾ ಸುದೀರ್ ಮತ್ತು ತಂಡದವರು ನೀಡಿದರು.
ಕನ್ನಡ ಜಾನಪದ ಪರಿಷತ್ತಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರಾಗಿ ರ. ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ್ ನೆಲಸೊಗಡು ಹಾಗೂ ಪದಾಧಿಕಾರಿಗಳಾಗಿ ಅಶ್ವಥ್ ನಾರಾಯಣಪ್ಪ, ಕೇಶವ್ ರಾಜ್, ಡಿ ಸಿ ಯತೀಶ್, ಅಭಿಷೇಕ್, ಶಿವಶಂಕರ್, ರಾಮಾಂಜನೇಯ, ಶ್ರೀಮತಿ ಸವಿತಾ ಮತ್ತಿತರರು ಆಧಿಕಾರ ಸ್ವೀಕರಿಸಿದರು.
ಈ ವೇಳೆ ಖ್ಯಾತ ವೀಣಾ ವಾದಕಿ ಹಾಗೂ ಸಿದ್ಧರಂಗ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮತಿ ರಂಗಮ್ಮ, ವಿಜಯನಗರ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷ ಉಮೇಶ್ ಚಂದ್ರ, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಗೌಡರು, ವಿಜಯ್ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ್, ರಾಜಾಜಿನಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್, ರಂಗೋತ್ರಿ ಕೆ ಹೆಚ್ ಕುಮಾರ್, ಪತ್ರಕರ್ತ ಬಿ ಎಸ್. ರಾಮಚಂದ್ರ, ಕೆಜೆವಿಎಸ್ ನ ಅಧ್ಯಕ್ಷ, ಬಾಲಾಜಿ, ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ರವಿದಾಸ್ ಬಿಂಡಿಗನವಿಲೆ,
ಸಪ್ತಗಿರಿ ಎಜುಕೇಷನ್ ಮತ್ತು ಕಲ್ಚರಲ್ ಟ್ರಸ್ಟ್ ನ ಕೆ ವಿ ಸಂದೀಪ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ರವಿಕಾಂತ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ನಾ. ಶ್ರೀಧರ್, ಬಾಲಾಜಿ, ವಾರ್ಡ್ ಅಧ್ಯಕ್ಷ ಪುರುಷೋತ್ತಮ್, ವಕೀಲರಾದ ಪರಮೇಶ್ವರ್, ಮುಖಂಡರಾದ ಲಿಂಗರಾಜು, ಎಂ. ನಾಗಮಣಿ, ಪ್ರೇಮಕುಮಾರ್, ಸಂತೋಷ್ ಕುಮಾರ್, ಪುರುಷೋತ್ತಮ್, ಕಣ್ಣಯ್ಯ, ನಂಜಪ್ಪ, ದೇವರಾಜ ಆರಸು ಮತ್ತಿತರರು ಹಾಜರಿದ್ದರು.