ಕಳೆದ ಹದಿನೈದು ದಿನಗಳ ಹಿಂದೆ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಕನಕತಾರ ನಿಧನರಾದ ಕಾರಣ, ಆ ಹುದ್ದೆಗೆ 2025 ರ ಜುಲೈ 24 ರಂದು ನಡೆಯುವ ರಾಜ್ಯ ಕಾರ್ಯಕಾರಿಣಿಯ ಸಭೆಯಲ್ಲಿ ಮುಂದಿನ ಪ್ರಧಾನ ಕಾರ್ಯದರ್ಶಿಯ ಆಯ್ಕೆಯ ಕುರಿತು ತೀರ್ಮಾನಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಅಲ್ಲಿಯವರೆಗೂ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕರಾಗಿರುವ ಪ್ರೊ ಕೆ.ಎಸ್ ಕೌಜಲಗಿ ಅವರಿಗೆ ಪ್ರಧಾನ ಕಾರ್ಯದರ್ಶಿಯ ಹುದ್ದೆಯನ್ನು ಅಧಿಕ ಪ್ರಭಾರವಾಗಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.ಇನ್ನು ಮುಂದೆ ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಕರಪತ್ರಗಳ ಎಲ್ಲಾ ಜಿಲ್ಲಾ ತಾಲೂಕು, ಹೋಬಳಿ ಗ್ರಾಮ.
ವಿಧಾನಸಭಾ ಕ್ಷೇತ್ರ ಘಟಕಗಳು, ಮಹಿಳಾ ಘಟಕಗಳು ಜಾನಪದ ಯುವ ಬ್ರಿಗೇಡ್ ಘಟಕಗಳು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರೊ.ಕೆ ಎಸ್ ಕೌಜಲಗಿ ಅವರ ಹೆಸರನ್ನು ಬಳಸಲು ತಿಳಿಸಿದೆ. ಇಂದಿನಿಂದ ಎಲ್ಲಾ ಎಲ್ಲಾ ಪರಿಷತ್ತಿನ ಪತ್ರ ವ್ಯವಹಾರಗಳಲ್ಲಿ ಆಹ್ವಾನ ಪತ್ರಿಕೆಗಳಲ್ಲಿ ಡಾ ಕನಕತಾರ ಅವರ ಹೆಸರ ಬದಲಾಗಿ ಪ್ರೊ. ಕೆ ಎಸ್ ಕೌಜಲಗಿ ಅವರ ಹೆಸರನ್ನು ಬಳಸಲು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.