ಆದರ್ಶ ಸುಗಮಸಂಗೀತ ಅಕಾಡೆಮಿ ವತಿಯಿಂದ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ಏರ್ಪಡಿಸಿದ್ದ “ಮೊಳಗಲಿ ಕನ್ನಡ ಜಯಭೇರಿ “ಕಾರ್ಯಕ್ರಮದಲ್ಲಿ ಖ್ಯಾತ ಕೀಬೋರ್ಡ್ ಕಲಾವಿದ ಶ್ರೀ ಕೃಷ್ಣ ಉಡುಪ ಅವರಿಗೆ ಹಾಗೂ ಹಿರಿಯ ಕೊಳಲು ವಾದಕರಾದ ಶ್ರೀ ಜಿ ಎಲ್ ರಮೇಶ್ ಕುಮಾರ್ ಅವರಿಗೆ ” ಕನ್ನಡ ನಿತ್ಯೋತ್ಸವ ಪ್ರಶಸ್ತಿ ” ನೀಡಿ ಗೌರವಿಸಲಾಯಿತು.
ಅಮೆರಿಕದ ಸಂಸ್ಕೃತಿ ಪ್ರತಿಷ್ಠಾನ ದ ಸಂಸ್ಥಾಪಕರಾದ ಶ್ರೀ ಗುರುಪ್ರಸಾದ್ ಹಾಗೂ ಅನಸೂಯ ಪ್ರಸಾದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು,ಹಿರಿಯ ಜಾನಪದ ಕಲಾವಿದ ಡಾ ಅಪ್ಪಗೆರೆ ತಿಮ್ಮರಾಜು,ಕೆ ಎಸ್ ನರಸಿಂಹ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ,ಮಹಾ ನಗರ ಪಾಲಿಕೆ ಎಂಜಿನಿಯರ್ ಶ್ರೀ ಚಂದ್ರಶೇಖರ್, ಗಾಯಕರಾದ ಶಿವಶಂಕರ್,ಶ್ರೀಧರ್,ಅಭಿಷೇಕ್ ರಾಮಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ಆದರ್ಶ ಸುಗಮಸಂಗೀತ ಅಕಾಡೆಮಿಯ ಕಲಾವಿದರು ದ ರಾ ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ,ಗೋವಿಂದ ಪೈ ಅವರ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ,ಕುವೆಂಪು ಅವರ ಕನ್ನಡ ಎನೆ ಕುಣಿದಾಡುವುದೆನ್ನೆದೆ,ಸಿದ್ದಯ್ಯ ಪುರಾಣಿಕರ ಹೊತ್ತಿತೋ ಹೊತ್ತಿತು ಕನ್ನಡದ ದೀಪ, ದೊಡ್ಡರಂಗೇಗೌಡರ ಕಲ್ಪ ಕಲ್ಪದಲ್ಲಿ ಕನ್ನಡ ಮುಂತಾದ ಗೀತೆಗಳನ್ನು ಹಾಡಿ ರಂಜಿಸಿದರು,ಖ್ಯಾತ ಕಲಾವಿದರಾದ ವಿದ್ವಾನ್ ಸುದತ್ತ,ರಮೇಶ್,ಅಭಿಷೇಕ್ ಮುಂತಾದ ಕಲಾವಿದರು ವಾದ್ಯ ಸಹಕಾರ ನೀಡಿದರು.