ಯಲಹಂಕ: ಕರ್ನಾಟಕ ಸಂಪನ್ಮೂಲ ಭರಿತ ರಾಜ್ಯ ಈ ರಾಜ್ಯದಲ್ಲಿನ ಸಾಹಿತ್ಯ, ಸಂಗೀತ, ಶೈಕ್ಷಣಿಕ,ಭೌತಿಕ, ಆರೋಗ್ಯಕರ ವಾತಾವರಣ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಹಾಗಾಗಿ ನಮ್ಮ ರಾಜ್ಯದಲ್ಲಿ ಅನ್ಯಭಾಷಿಕರು ಜೀವನ ಕಟ್ಟಿಕೊಳ್ಳಲು ವ್ಯಾಪಾರದ ಸಲುವಾಗಿ ಬಂದು ಕನ್ನಡಿಗರನ್ನೇ ಒಕ್ಕಲಬ್ಬಿಸುವ ತಂತ್ರವನ್ನು ಮಾಡುತ್ತಿದ್ದಾರೆ ಅಂತಹ ದ್ರೋಹಿಗಳಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇನೆ .
ನಿಮ್ಮ ಷಡ್ಯಂತ್ರ ಫಲಿಸಲು ಕರ್ನಾಟಕ ರಕ್ಷಣಾ ವೇದಿಕೆ ಅವಕಾಶ ನೀಡುವುದಿಲ್ಲ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಚ್ಚರಿಕೆಯಿಂದ ಕನ್ನಡವನ್ನು ಕಲಿತು ಬಳಸಿ ನಡೆದರೆ ಮಾತ್ರ ನಿಮಗಿಲ್ಲಿ ಉಳಿಯಲು ಸಾಧ್ಯ ಎಂದು ಯಲಹಂಕದ ವೀರಸಾಗರ ಗ್ರಾಮದಲ್ಲಿ ಆಯೋಜಿಸಿದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡ್ರು ಗುಡುಗಿದರು.
ಹಳ್ಳಿ ಕನ್ನಡ ಹಬ್ಬ ಎಂಬ ವಿಶೇಷ ತೀರ್ಷಿಕೆಡಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷ ಟಿ ನಾರಾಯಣ ಗೌಡ್ರು ವಹಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ್ ನೆಡಿಸಿದರು.
ಈ ಅದ್ದೂರಿ ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಆಯೋಜಿಸಿದ್ದು ಬೃಂದಾವನ ಇವೆಂಟ್ಸ್ ಯಲಹಂಕ ಇವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ದಾ. ಪಿ. ಅಂಜನಪ್ಪ, ಯಲಹಂಕ ಅಧ್ಯಕ್ಷರಾದ ಪ್ರಕಾಶ್ ಗೌಡ್ರು, ಅಶ್ವತ್ ನಾರಾಯಣ್ ವೀರ ಸಾಗರ, ಲೋಕೇಶ್ ಕ್ಯಾರಿಯನ್ ಹೋಟೆಲ್ ಮಾಲೀಕರು, ಸಲ್ಮಾನ್ ಡಬ್ಲ್ಯೂ ಟಿ ಬಿ ಐ ಸ್ಥಾಪಕರು, ಮಂಜೇಗೌಡರು ನೆಲಮಂಗಲ ತಾಲೂಕು ಅಧ್ಯಕ್ಷರು, ವೀರಸಾಗರ ಮುಖಂಡರಾದ ನಾಗೇಶ್,ವಿನೋದ್ ಕೃಷ್ಣಮೂರ್ತಿ, ರಘು,ದಾಸನಪುರ ಹೋಬಳಿ ಅಧ್ಯಕ್ಷರಾದ ಮಂಜೇಶ್ ಕೆ ಎಸ್ ಉಪಾಧ್ಯಕ್ಷರಾದ ಗೋವಿಂದರಾಜು (ಆರ್ ಎಂ ಸಿ ) ಪ್ರಧಾನ ಕಾರ್ಯದರ್ಶಿ ಚಂದ್ರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.