ಓ ಕನ್ನಡಿಗರೇ ಏಳಿ ಎದ್ದೇಳಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ
ಬಾವುಟ ಹಾರಿಸಿ ಘೋಷಣೆ ಕೂಗಿ
ಎಲ್ಲರೂ ಒಂದಾಗಿ ಕುಣಿದು ಕುಪ್ಪಳಿಸಿ
ಕನ್ನಡ ರಾಜ್ಯೋತ್ಸವ ಮಾಡೋಣ
ತೊರಣ ಕಟ್ಟಿ ಹೂಮಾಲೆ ಹಾಕಿ
ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಗಿ
ಅದ್ದೂರಿ ಸುಂದರ ವೇದಿಕೆಯ ಕಟ್ಟಿ
ದೇವಿ ಮೂರ್ತಿಯ ಚೆಂದದಿ ಸಿಂಗರಿಸಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ
ತೆರೆಮರೆ ಕನ್ನಡದ ಸಾಧಕರ ಹುಡುಕಿ
ಶಾಲುಗಳ ಹೊದಿಸಿ ಹಾರಗಳ ಹಾಕಿ
ಅವರಾಡುವ ಕನ್ನಡದ ಸವಿ ನುಡಿ ಕೇಳಿ
ದೇವಿಗೆ ಆರತಿ ಬೆಳಗಿ ಹೂಮಾಲೆ ಹಾಕಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ
ಬರಿ ಈ ಆಡಂಬರ ಸಂಭ್ರಮವು ಸಾಕೆ ?
ಜೊತೆಗೆ ಕಟ್ಟೋಣ ತಾಯಿಗೆ ನಿಜವಾದ ವೇದಿಕೆ
ತನು ಕನ್ನಡ ಮನ ಕನ್ನಡ ನುಡಿ ಕನ್ನಡ ವೆಂದು
ಪ್ರತಿಯೊಬ್ಬ ಕನ್ನಡಿಗ ಛಲದಲ್ಲಿ ನಿಂದು
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ತಾಯಿ ಮಕ್ಕಳ ಮೊದಲ ಗುರುವಾಗಿ
ಮಮ್ಮಿ ಸಂಸ್ಕöÈತಿಯ ತೊಳೆದು ಅಳಿಸಿ
ಕನ್ನಡದ ಮುದ್ದಾದ ಮಾತು ಕಲಿಸಿ
ಅಚ್ಚ ಕನ್ನಡಿಗರ ಬಲದ ಸೇನೆ ಬೆಳಸಿ
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ಹಲೋ ಬೈ ಬೈಗೆ ಹೇಳಿರಿ ಟಾಟಾ
ಮಾಡಿ ನಮಸ್ತೆ ವಂದನೆಯ ಪಾಠ
ಇಂಗ್ಲೀಷ್ ಬಾಷೆ ಬರಿ ವ್ಯವಹಾಕ್ಕಿರಲಿ
ಕಸ್ತೂರಿ ಕನ್ನಡ ಮನವ ತುಂಬಿರಲಿ
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ಕನ್ನಡ ಪುಸ್ತಕ ಕತೆಕವನಗಳ ನಂಟು
ಬೆಳೆಯಲಿ ಮಕ್ಕಳ ಜೊತೆಯಲಿ ಒಂದಿಷ್ಟು
ಕುವೆAಪು ,ಬೇಂದ್ರೆ ಮಾಸ್ತಿ ಕವಿಗಳ ಸಾಲು
ಮುದ ನೀಡಲಿ ಆಗಾಗ ಮನಕೆ ಇಂತಿಷ್ಟು
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ಬಾರದವರಿಗೆ ಕನ್ನಡ ಭಾಷೆಯ ಕಲಿಸಿ
ನೀವೂ ಕನ್ನಡವ ಉಳಿಸಿ ಬೆಳಸಿ
ಆಡಳಿತ ಭಾಷೆ ಮಾದ್ಯಮಿಕ ಶಿಕ್ಷಣ ಪೂರ್ಣ ಕನ್ನಡವಾಗಿ
ಉಳಿಯಲಿ, ಬೆಳೆಯಲಿ, ಬೆಳಗಲಿ ಕನ್ನಡ
ಓ ಕನ್ನಡಿಗರೇ ಏಳಿ ಎದ್ದೇಳಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ
ಕವನ ರಚನೆ
ನಾಗವೇಣಿ ರಂಗನ್