ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆ, ಬೆಂಗಳೂರು, ಇಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಅರ್ಥಪೂರ್ಣವಾಗಿ ಅಚ್ಚು ಕಟ್ಟಾಗಿ ಆಚರಣೆಯಾಗಿ ಸಭಿಕರ ಮನಸೂರೆಗೊಂಡಿತು.ನಾಡ ಗೀತೆಯೊಂದಿಗೆ ಕನ್ನಡ ರಾಜ್ಯೋತ್ಸವದ ಆಚರಣೆ ಪ್ರಾರಂಭವಾಯಿತು.
ಸಂಸ್ಥೆಯ ನಿರ್ದೇಶಕರಾದ ಡಾ|| ಕೆ.ಎಸ್.ರವೀಂದ್ರನಾಥ್ ರವರು ಕರುನಾಡ ಧ್ವಜಾರೋಹಣ ಮಾಡಿ, ಕನ್ನಡ ನೆಲ, ಜಲ, ನುಡಿ, ಕನ್ನಡ ಕವಿಗಳ ಸ್ವಾರಸ್ಯಕರವಾದ, ಮೌಲ್ಯಾಧಾರಿತ ಸಂದೇಶಗಳನ್ನು ತಮ್ಮ ಭಾಷಣದಲ್ಲಿ ಸಾರಿ ಹೇಳಿದರು.ಕನ್ನಡದ ಉಳಿವಿಗೆ, ಏಳಿಗೆಗೆ ಶ್ರಮಿಸಿದವರನ್ನು ಗುಣಗಾನ ಮಾಡುತ್ತಾ ಅನೇಕ ಕವಿ ಶ್ರೇಷ್ಠರು ಸಭಿಕರ ಸ್ಮೃತಿ ಪಟಿಲದಲ್ಲಿ ಮೆಲುಕು ಹಾಕುವಂತೆ ಮಾಡಿದರು ಮಾತ್ರವಲ್ಲ.
ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವನ್ನು ಎಚ್ಚರಿಸಿ ಮಹತ್ತರವಾದ ಕನ್ನಡಿ ಹಿಡಿದಂತೆ ಮಾಡಿ ತಮ್ಮ ಸ್ವಚ್ಛ ಕನ್ನಡ ಅಭಿಮಾನವನ್ನು ತೋರಿಸಿ ಎಲ್ಲರ ಅಭಿಮಾನಕ್ಕೆ ಪಾತ್ರರಾದರು, ಕನ್ನಡದ ಈ ಉತ್ಸವ ನಿತ್ಯೋತ್ಸವವಾಗಲಿ ಎಂದು ಆಶಿಸಿದರು.ವೇದಿಕೆಗೆಯ ಸೀಮೆಯನ್ನು ಎಲ್ಲರಿಗೂ ತೆರೆದಿಟ್ಟು , ಭಾಷಣಕಾರರನ್ನು, ಹಾಡುಗಾರರನ್ನು, ಮನರಂಜನೆಕಾರರನ್ನು ವೇದಿಕೆಗೆ ಆಹ್ವಾನಿಸಿ ಆಸಕ್ತರಿಗೆ ಅವಕಾಶ ಕಲ್ಪಿಸಿಕೊಟ್ಟ ಹೃದಯವಂತಿಕೆ ಎಲ್ಲರ ಶ್ಲಾಘನೀಯಕ್ಕೆ ಪಾತ್ರವಾಯಿತು.
ವೈದ್ಯಕೀಯ ವ್ಯವಸ್ಥಾಪಕರಾದ ಡಾ|| ಕೆ.ಹೆಚ್.ಶ್ರೀನಿವಾಸ್ ರವರು ಎಂದಿನಂತೆ ಸಹಕಾರ ಹಾಗೂ ಉತ್ತೇಜನವನ್ನು ಕೊಡುತ್ತಿದ್ದದ್ದು ಎದ್ದು ಕಾಣುತ್ತಿತ್ತು, ಇದೇ ಭಾಗವಹಿಸುವಿಕೆಯ ವಿಶೇಷವಾದ ಲಕ್ಷಣ. ಸಂಸ್ಥೆಯ ಸಿಬ್ಬಂದಿ ವರ್ಗದ ಅನೇಕರು ಭಾಷಣ ಮಾಡಿದರು, ಗೀತೆಗಳನ್ನು ಪ್ರಸ್ತುತ ಪಡಿಸಿದರು.
ದೀರ್ಘ ಕಾಲದ ಸಂಸ್ಥೆಯ ಅಭಿಮಾನಿ ಡಾ|| ವೈ.ವಿ. ನಾಗರಾಜ್ ರವರು ಕನ್ನಡದ ವರನಟ ಡಾ||ರಾಜಕುಮಾರ್ ರವರು ನಟಿಸಿದ ಕೆಲವು ಪೌರಾಣಿಕ, ಐತಿಹಾಸಿಕ ಪಾತ್ರಗಳ ನಿರ್ವಹಣೆ ಮಾಡಿ ಕನ್ನಡದ ಅಭಿಮಾನವನ್ನು ವಿಶೇಷ ರೀತಿಯಲ್ಲಿ ವ್ಯಕ್ತಪಡಿಸಿದರು. ಮತ್ತು ತಮ್ಮ ಕಿರು ಭಾಷಣದಲ್ಲಿ ಕನ್ನಡ ವರ್ಣಮಾಲೆ ಹಾಗೂ ಕಾಗುಣಿತದ ಅಭ್ಯಾಸ ಶುದ್ಧ ಭಾಷೆಗೆ ಅಗತ್ಯವೆಂದು ನೆನಪಿಸಿದರು. ನಿರೂಪಣೆಯನ್ನು ಶ್ರೀ ಬಸವರಾಜ್ ಪುರುಷ ಶಿಶ್ರೂಷಕ ಹಾಗೂ ಶ್ರೀಮತಿ ಶೃತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಮಂಜಸವಾಗಿ ನಿರ್ವಹಿಸಿದರು. ಸಿಹಿ ವಿತರಣೆಯೊಂದಿಗೆ ಮುಕ್ತಾಯವಾದ ಇಂದಿನ ಕಾರ್ಯಕ್ರಮ ಎಲ್ಲರ ನೆನಪಿನಲ್ಲಿ ಸದಾ ಉಳಿಯುವಂತಾಗಿ ಸಾರ್ಥಕವಾಗಿದೆ.