ಬೆಂಗಳೂರು: ದಾಬಸ್ ಪೇಟೆ ಪೊಲೀಸರು ಜುಲೈ 27ರಂದು ಸೋಂಪುರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸ್ಕೈ ಸ್ಟೇಟಸ್ ಎಂಬ ಫ್ಯಾಕ್ಟರಿಯಲ್ಲಿ ಕಬ್ಬಿಣ, ಅಲ್ಯೂಮಿನಿಯಂ ಮತ್ತು ಕಾಪರ್ ಗಳನ್ನು ಕಳುವು ಮಾಡಿದ ದೂರು ದಾಖಲಾಗಿತ್ತು.
ರಾಹುಲ್ ದೇವದಾಸಿ ಎಂಬ ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ಕಳವು ಮಾಡಿದ್ದಾರೆ ಎನ್ನಲಾದ ಆರೋಪಿಗಳಾದ ನಯಾಜ್, ಫೈಯದ್ ಮುಕ್ತಿಯರ್, ತೌಸೀಫ್, ವಾಸಿಮ್, ಇಮ್ರಾನ್, ಶಾಹಿದ್ ಮತ್ತು ಸೈಯದ್ ಎಂಬ 25 ರಿಂದ 35 ವರ್ಷದೊಳಗಿನ ಆರೋಪಿಗಳನ್ನು ಬಂಧಿಸಿರುತ್ತಾರೆ.
ಇವರುಗಳಿಂದ 75 ಕೆಜಿ ಅಲುಮಿನಿಯಂ 75 ಕೆಜಿ ಕಾಪರ್ ವೈರ್ ಗಳನ್ನು ವಶಪಡಿಸಿಕೊಂಡು ಒಂದುವರೆ ಟನ್ ಕಬ್ಬಿಣವನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಬಾಬರ್ ಅವರು ತಿಳಿಸಿದರು.ಇವುಗಳ ಮೌಲ್ಯ 11 ಲಕ್ಷವಾಗಿರುತ್ತದೆ.