ಮಳವಳ್ಳಿ: ತಾಲ್ಲೂಕು ಘಟಕ ಹಲಗೂರು ಹೋಬಳಿಯ ಬಾಳೆ ಹೊನ್ನಿಗ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಉದ್ಘಾಟನೆ ಉದ್ಘಾಟನೆಗೊಂಡಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರವೇ ತಾಲ್ಲೂಕು ಅಧ್ಯಕ್ಷರಾದ ಅಪ್ಪೆ ಗೌಡ ನಮ್ಮ ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ರೈತರ ಸಮಸ್ಯೆ ಸಾರ್ವಜನಿಕರ ಸಮಸ್ಯೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಜನರಿಗೆ ಉಪಯುಕ್ತ ಕೆಲಸಗಳನ್ನು ಮಾಡಿಕೊಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಕ್ಷರು ವಿಜಯ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ. ಎಸ್, ತಾಲೂಕು ಸಂಚಾಲಕ ಶೇಖರ್, ಹಲಗೂರು ಹೋಬಳಿ ಅಧ್ಯಕ್ಷರು ಗಂಗರಾಜು, ಗ್ರಾಮದ ಅಧ್ಯಕ್ಷರು ಸಿದ್ದಯ್ಯ, ಮಹೇಶ್, ಗ್ರಾಮದ ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು.