ಸಂಭಾಲ್: ವಿದ್ಯುತ್ ಕಳ್ಳತನ ಮಾಡಿದ ಆರೋಪ ಎದುರಿಸುತ್ತಿದ್ದ ಉತ್ತರ ಪ್ರದೇಶದ ಸಂಭಾಲ್ ಸಂಸದ ಕ್ಷೇತ್ರದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಗೆ ಅಲ್ಲಿನ ವಿದ್ಯುತ್ ಇಲಾಖೆ ಬರೊಬ್ಬರಿ 1.91 ಕೋಟಿ ರೂ ದಂಡ ವಿಧಿಸಿದ್ದು, ಅವರ ಮನೆಗೆ ವಿದ್ಯುತ್ ಸ್ಥಗಿತ ಶಿಕ್ಷೆ ವಿಧಿಸಿದೆ.
ಹೌದು.. ಸಂಭಾಲ್ ದೀಪಾ ಸರಾಯ್ನಲ್ಲಿರುವ ಸಮಾಜವಾದಿ ಪಕ್ಷದ ಸಂಭಾಲ್ ಕ್ಷೇತ್ರದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಅವರು ತಮ ಮನೆಗೆ ಅಕ್ರಮ ಸಂಕರ್ಪ ಪಡೆದ ಹಿನ್ನಲೆಯಲ್ಲಿ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದೀಗ ವಿದ್ಯುತ್ ಕಳ್ಳತನದ ಆರೋಪದ ಮೇರೆಗೆ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಗೆ ವಿದ್ಯುತ್ ಇಲಾಖೆ 1.91 ಕೋಟಿ ರೂ ದಂಡ ಹಾಕಿದ್ದು ಮಾತ್ರವಲ್ಲದೇ ಆತನ ಮನೆಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿದೆ.
ಸಂಸದ ಜಿಯಾವುರ್ ರೆಹಮಾನ್ ವಿರುದ್ಧ ವಿದ್ಯುತ್ ಕಾಯ್ದೆ, 2003, (ವಿದ್ಯುತ್ ಕಳ್ಳತನ ಅಥವಾ ಅನಧಿಕೃತ ವಿದ್ಯುತ್ ಬಳಕೆ) ಸೆಕ್ಷನ್ 135 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿದ್ಯುತ್ ಪರೀಕ್ಷಾ ಪ್ರಯೋಗಾಲಯದಿಂದ ಪಡೆದ ಗ್ರಾಹಕರ ಮೀಟರ್ ಪರಿಶೀಲಿಸಿದಾಗ ಮೀಟರ್ ಬೈಪಾಸ್ ಮಾಡಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿ ವಿದ್ಯುತ್ ಕಳ್ಳತನ ಮಾಡಿರುವುದು ಸ್ಪಷ್ಟವಾಗಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ FIR ದಾಖಲಿಸಲಾಗಿತ್ತು. ಭಾರೀ ಭದ್ರತೆಯ ನಡುವೆ ಸಂಸದರ ನಿವಾಸವನ್ನು ಇಲಾಖೆ ಪರಿಶೀಲಿನೆ ಕೂಡ ನಡೆಸಿತ್ತು.
ಇದೇ ಪ್ರಕರಣದಲ್ಲಿ ನಿವಾಸದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅವರ ತಂದೆ ಮಾಮ್ಲುಕೂರ್ ರೆಹಮಾನ್ ಬಾರ್ಕ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪರಿಶೀಲನೆಯ ಸಮಯದಲ್ಲಿ, ಎಂಜಿನಿಯರ್ಗಳಾದ ಅಜಯ್ ಶರ್ಮಾ ಮತ್ತು ವಿ ಕೆ ಗಂಗಲ್ ಅವರು ಸಂಸದರ ತಂದೆಯಿಂದ ತಮಗೆ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.