ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕರೋಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅನೇಕ ವರ್ಷದಿಂದ ಸುಣ್ಣ-ಬಣ್ಣ ಕಾಣದೇ ಹಳೆಯ ಕಟ್ಟಡದಂತೆ ಕಾಣುತ್ತಿದ್ದ ಶಾಲಾ ಕಟ್ಟಡಕ್ಕೆ ಬಣ್ಣ ಸುಣ್ಣ ಹಾಗೂ ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯರ ಭಾವಚಿತ್ರ ಮೂಡಿಸಿ ಹೊಸ ಸ್ಪರ್ಶ ನೀಡಿದ್ದಾರೆ.
ಭರವಸೆ ಬಳಗದ ಪ್ರಮುಖ ಸದಸ್ಯ ಸುನಿಲ್ ಗೌಡ ನಮ್ಮ ಭರವಸೆ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಅಳಿಲು ಕಾಯಕವನ್ನು ರಾಜ್ಯಾದ್ಯಂತ ಕೈಗೊಳ್ಳುತ್ತಿದ್ದೇವೆ ಅದರಂತೆ ೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಶಂಕರ್ ನಾಗ್ ರವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಯ ಉಳಿವಿಗಾಗಿ ಕರೋಟಿ ಗ್ರಾಮದ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣವನ್ನು ಕೈಗೊಂಡಿದ್ದೇವೆ ಎಂದರು.
ಬಳಿಕ ಮಾತನಾಡಿ ಶಾಲಾ ಮುಖ್ಯ ಶಿಕ್ಷಕ ಮಂಜೇಗೌಡ ಸರ್ಕಾರದ ಜೊತೆಗೆ ಸಮಾಜ ಸೇವಕರು, ಭರವಸೆ ಟ್ರಸ್ಟ್ ಅಂತಹ ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ.
ಖಾಸಗಿ ಶಾಲೆಗಿಂತ ನಮ್ಮ ಸರ್ಕಾರಿ ಶಾಲೆಯೇನು ಕಡಿಮೆ ಇಲ್ಲವೇನು ಎಂಬುವAತೆ ಕಾಣುತ್ತಿದೆ.ಆದರೆ ಇದಕ್ಕೆಲ್ಲ ಕಾರಣ ಭರವಸೆ ಟ್ರಸ್ಟ್. ಸದಸ್ಯರು ಸ್ವಯಂಪ್ರೇರಿತವಾಗಿ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಮೂಲಕ ಶಿಕ್ಷಣ ಕಲಿಯಬೇಕು ಎನ್ನುವ ಮಕ್ಕಳ ಉತ್ಸಾಹಕ್ಕೆ ಉತ್ತೇಜನ ನೀಡಿದ್ದಾರೆ ಎಂದರು.
ಗ್ರಾಮದ ಮುಖಂಡ ಪುಟ್ಟೇಗೌಡ ಮಾತನಾಡಿ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹಳೆಯ ಕಟ್ಟಡಕ್ಕೆ ಕಳೆದ ೧೫ ವರ್ಷದಿಂದ ಹನಿ ಸುಣ್ಣಬಣ್ಣ ಕಾಣದೇ ಹಳೆಯ ಭೂತ ಮನೆಯಂತೆ ಇತ್ತು. ಸದ್ಯ ಶಾಲೆಗೆ ಸುಣ್ಣ ಬಣ್ಣ ಬಳಿದು ಸರ್ಕಾರಿ ಶಾಲೆಯನ್ನು ಸುಂದರಗೊಳಿಸಿ ಮುಂದಿನ ವರ್ಷಗಳಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆಯಲ್ಲಿದೆ.ಭರವಸೆಯ ಸದಸ್ಯರು ಹಾಗೂ ಕಲಾವಿದರು ೨ ದಿನಗಳ ಕಾಲ ಶಾಲೆಗೆ ಸುಣ್ಣ ಬಣ್ಣ ಬಳಿದು ನಮ್ಮ ಸರ್ಕಾರಿ ಶಾಲೆಗೆ ಹೊಸ ವಿನ್ಯಾಸ ನೀಡಿದ್ದಾರೆ ಎಂದರು.
ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಕೆಲವೊಂದು ಬಣ್ಣ ಬಣ್ಣದ ಚಿತ್ತಾರವನ್ನು ಶಾಲೆಯ ಗೋಡೆ ಹಾಗೂ ಕಾಂಪೌAಡ್ ಮೇಲೆ ಬಿಡಿಸಿದ್ದಾರೆ. ರಾಷ್ಟç ಮತ್ತು ರಾಜ್ಯದ ಮಹನೀಯರ ಭಾವಚಿತ್ರ ಸೇರಿ ಹಲವು ಚಿತ್ರ ಹಾಗೂ ಸಂದೇಶಗಳನ್ನು ಶಾಲೆಯ ಗೋಡೆಯ ಮೇಲೆ ಕುಂಚದಿAದ ಸೃಷ್ಟಿಸಿದ ಭರವಸೆಯ ಬಳಗದ ಸದಸ್ಯರಿಗೆ ಕರೋಟಿ ಗ್ರಾಮಸ್ಥರು ಶಾಲಾ ಎಸ್.ಡಿ.ಎಂ.ಸಿ ಸನ್ಮಾನಿಸುವ ಮುಖಾಂತರ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎನ್.ಜಿ.ಓ ಭರವಸೆ ಪ್ರಮುಖ ಸದಸ್ಯರುಗಳಾದ ಅನುಷಾ, ಸುನಿಲ್,ಮಂಜೇಶ್, ಅಭಿಷೇಕ್, ಯೋಗೇಶ್, ಆರ್ಶಿತ್, ಪೂಜಾ, ಮನೀಶ್,ನಿಷತ್, ಗ್ರಾ.ಪಂ ಸದಸ್ಯ ಕರೋಟಿ ಅನಿಲ್,ಶಾಲೆ ಮುಖ್ಯ ಶಿಕ್ಷಕ ಮಂಜೇಗೌಡ,ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್,ರೈತ ಮುಖಂಡ ಕರೋಟಿ ತಮ್ಮಯ್ಯ, ಪುಟ್ಟೇಗೌಡ,ಅಂಗಡಿ ರಮೇಶ್, ಅಂಗನವಾಡಿ ಕಾರ್ಯಕರ್ತೆ, ಸೇರಿದಂತೆ ಉಪಸ್ಥಿತರಿದ್ದರು.