ಆನೇಕಲ್: ಕರ್ನಾಟಕವು ಐಟಿ-ಬಿಟಿ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿ ಸ್ಥಾನದಲ್ಲಿದ್ದು, ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿ ಸ್ಥಾನ ಪಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ತಾಲ್ಲೂಕಿನ ಆಲಯನ್ಸ್ ವಿಶ್ವವಿದ್ಯಾಲ ಯದ 13ನೇ ಘಟಿಕೋತ್ಸ ವದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ಎಲೆ ಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ನಮ್ಮ ರಾಜ್ಯವು ವಿಶ್ವಕ್ಕೆ ಮಾದರಿಯಾಗಿದೆ. ಈ ಕ್ಷೇತ್ರವನ್ನು ವಿದ್ಯಾರ್ಥಿಗಳು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯಬೇಕೆಂದು ಅವರು ಹೇಳಿದರು.
ವಿಧಾನ ಪರಿಷತ್ ಸಭಾಧ್ಯಕ್ಷ ಬಸವ ರಾಜ ಹೊರಟ್ಟಿ ಮಾತನಾಡಿ, ವಿದ್ಯಾರ್ಥಿ ಗಳು ಪದವಿ ಪಡೆಯುವುದು ಮೊದಲ ಹಂತವಾದರೆ, ಅದರ ನಂತರದ ವೃತ್ತಿ ಬದುಕಿನಲ್ಲಿ ಜೀವನಪರ್ಯಂತ ಕಲಿಕೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ತಮ್ಮಕ್ಷೇತ್ರದಲ್ಲಿ ಉನ್ನತವಾದುದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗೋವಾ ರಾಜ್ಯದ ರಾಜ್ಯಪಾಲ ಶ್ರೀಧ ರನ್ ಪಿಳ್ಳೆ ಮಾತನಾಡಿ, ಶಿಕ್ಷಣವು ಕೇವಲ ವೃತ್ತಿಜೀವನಕ್ಕೆ ಮಾತ್ರ ಸೀಮಿತವಲ್ಲ. ಅರ್ಥಪೂರ್ಣ ಜೀವನಕ್ಕೆ ಅಡಿಪಾಯ ವಾಗಬೇಕು. ಆ ನಿಟ್ಟಿನ ಕಲಿಕೆ ಮಾತ್ರ ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಲ್ಲದು ಎಂದು ತಿಳಿಸಿದರು.ಇದೇ ವೇಳೆ ಅಲಯನ್ಸ್ ವಿಶ್ವವಿದ್ಯಾಲ ಯದ 13ನೇ ಘಟಿಕೋತ್ಸವದಲ್ಲಿ ಒಟ್ಟು 1,145 ವಿದ್ಯಾರ್ಥಿಗಳು ಯುಜಿ ಮತ್ತು ಪಿಜಿ ಪದವಿಗಳನ್ನು ಮತ್ತು ಪಿಎಚ್ಡಿ ಪದವಿ ಪತ್ರಗಳನ್ನು ಪಡೆದರು.
ಕಾರ್ಯ ಕ್ರಮದಲ್ಲಿ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿ ಯ ಅಧ್ಯಕ್ಷ ಡಾ.ಜಿ. ಸತೀಶ್ ರೆಡ್ಡಿ, ಅಲೈಯನ್ಸ್ ವಿಶ್ವವಿದ್ಯಾ ಲಯದ ಉಪಕುಲಪತಿ ಡಾ. ಪ್ರೀಸ್ಟಿ ಶಾನ್ ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾ ಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.