ನವದೆಹಲಿಯಲ್ಲಿ ಕೇಂದ್ರ ಭವಿಷ್ಯ ನಿಧಿ ಆಯುಕ್ತರಾದ ಶ್ರೀಮತಿ ನೀಲಂ ಶಮೀರಾವ್, ಐಎಎಸ್ ರವರನ್ನು ಮತ್ತು ಹೆಚ್ಚುವರಿ ಅಯುಕ್ತರಾದ ಶ್ರೀಮತಿ ಅಪರಾಜಿತ್ ಜಗ್ಗಿ ರವರನ್ನು ಐಎನ್ ಟಿಯುಸಿ ರಾಜ್ಯ ಪ್ರಧಾನಕಾರ್ಯದರ್ಶಿ ವೆಂಕಟೇಶ್ ಮತ್ತು ಐಎನ್ ಟಿಯುಸಿ ಪದಾಧಿಕಾರಿಗಳು ಭೇಟಿಯಾಗಿ ಮನವಿ ಸಲ್ಲಿಸಿದರು.
ಇಪಿಎಸ್, ೧೯೯೫ ರ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯ ಪಿಂಚಣಿದಾರರು ಕಡಿಮೆ ಪಿಂಚಣಿಗಳನ್ನು ಪಡೆಯುತ್ತಾರೆ ಅದು ಬೆಳೆಯುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿಲ್ಲ.
ಅದರಿಂದ ಅದನ್ನು ಪುನರ್ ಪರಿಶೀಲನೆ ನಡೆಸಿ ಶೀಘ್ರವೇ ಹೊಸದಾಗಿ ಯೋಜನೆಯ ಮೂಲಕ ಇಪಿಎಫ್ ಉದ್ಯೋಗಿ ಸದಸ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಕಾರ್ಮಿಕರಿಗೆ ಸಹಾಯವಾಗುವ ವಿಚಾರಗಳ ಬಗ್ಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಐಎನ್ ಟಿಯುಸಿ ಪದಾಧಿಕಾರಿಗಳಾದ ಎನ್. ಕುಮಾರ್, ಶ್ರೀನಿವಾಸಯ್ಯ ಮತ್ತಿತರರು ಉಪಸ್ಥಿತರಿದ್ದರು.