ವಿಜಯಪುರ: ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಇದ್ದೇ ಇರುತ್ತೆ. ಈ ವಿಚಾರವಾಗಿ ಪ್ರಹ್ಲಾದ್ ಜೋಶಿ ಹೇಳಿರುವುದು ಸರಿಯಿದೆ. ಯಾರು ಅಧ್ಯಕ್ಷರು ಆಗುತ್ತಾರೆಂಬುದನ್ನು ಕೇಂದ್ರಕ್ಕೆ ಬಿಡುತ್ತೇವೆ. ಈಗ ಇರುವುದು ಹಂಗಾಮಿ ಅಧ್ಯಕ್ಷರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿರುವುದು ಸರಿಯಿದೆ. ಪ್ರಹ್ಲಾದ್ ಜೋಶಿ ನಮ್ಮ ಪಕ್ಷದ ನಿಯಮಗಳ ಬಗ್ಗೆ ಹೇಳಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಜೋಶಿ ಅವರು ನಮ್ಮ ಪಕ್ಷದ ನಿಯಮಗಳ ಬಗ್ಗೆ ಹೇಳಿದ್ದಾರೆ. ಅದನ್ನು ವಿವಾದ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಯತ್ನಾಳ್, ಚುನಾವಣೆ ಆಗಲ್ಲ. ಸಹಮತ ಮಾಡಿಕೊಂಡು ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಪದ್ದತಿಯಿದೆ. ಚುನಾವಣಾ ಆಯೋಗದ ನಿಬಂಧನೆಗಳು ಇವೆ. ಈ ನಿಬಂಧನೆಗಳನ್ನು ಪಾಲನೆ ಮಾಡಿ ರಾಷ್ಟ್ರೀಯ ಆಧ್ಯಕ್ಷರ ಸೂಚನೆ ಮೇರೆಗೆ ಘೋಷಣೆ ಆಗುತ್ತದೆ. ಜಿಲ್ಲಾ ಘಟಕದ ಆಧ್ಯಕ್ಷರ ಬದಲಾವಣೆಯೂ ಆಗಲಿದೆ ಎಂದ ಬಾಂಬ್ ಸಿಡಿಸಿದರು.