ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜನೆ ಮಾಡಿರುವ ಕಲ್ಯಾಣ ಕರ್ನಾಟಕ ಸಿರಿ ಪ್ರಶಸ್ತಿಯನ್ನು ಇಂದುಮತಿ ಬಿ.ದೇಶಮಾನೆ ಅವರನ್ನು ಅತ್ಯುತ್ತಮ ಮೆಕ್ಯಾನಿಕಲ್ ಇಂಜಿನಿಯರ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕುರಿತು 2024 ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ. ಡಾ. ಇಂದುಮತಿ ಬಿ. ದೇಶಮಾನೆ ಅವರು ಸ್ವತಂತ್ರ ಹೋರಾಟಗಾರರಾದ ಕಲ್ಬುರ್ಗಿ ಶ್ರೀ ಬಾಬುರಾವ್ ದೇಶಮಾನೆ ಮತ್ತು ಶ್ರೀ ರತ್ನಮ್ಮ ದಂಪತಿಯವರ ಪುತ್ರಿಯಾಗಿರುತ್ತಾರೆ. ಕಲ್ಬುರ್ಗಿಯಲ್ಲಿಯೇ ಹೆಸರುವಾಸಿಯಾದ ಕುಟುಂಬದ ಕುಡಿಯಾದ ಇಂದುಮತಿ ಬಿ. ದೇಶಮಾನೆ ಇನ್ನಷ್ಟು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಳ್ಳಲಿ ಎಂದು ಶುಭ ಹಾರೈಕೆ.
