ಬೆಂಗಳೂರು: ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಹಾಗೂ ಕರ್ನಾಟಕ ರಾಜ್ಯಾದ್ಯಂತ ಮಹಿಳಾ ಸಬಲೀಕರಣ ಮತ್ತು ನೊಂದವರಿಗೆ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ಡಾ. ನಾಗಲಕ್ಷ್ಮಿ ಚೌಧರಿ ಅವರ ಸೇವೆಯನ್ನ ಗುರುತಿಸಿ ದುಬೈಯಲ್ಲಿ ಅನಿವಾಸಿ ಭಾರತೀಯ ಕನ್ನಡಿಗರ ದುಬೈ ಜಿ ಟಿ ಡಿ ಗ್ರೂಪ್ಸ್ ವತಿಯಿಂದ ನಡೆದ 2025 ನೇ ಸಾಲಿನ ಅಂತರರಾಷ್ಟ್ರೀಯ ಗಂಧದಗುಡಿ ಪ್ರಶಸ್ತಿ ಪುರಸ್ಕೃತರಾಗಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ,
ಕನ್ನಡ ಜಾನಪದ ಪರಿಷತ್ತಿನ ಗೋವಿಂದರಾಜನಗರ ಘಟಕದ ಅಧ್ಯಕ್ಷ ರ. ನರಸಿಂಹಮೂರ್ತಿ, ಮಹೇಂದ್ರ, ಶ್ರೀನಿವಾಸ್, ಪೂರ್ಣಿಮಾ, ಲಕ್ಷ್ಮೀ ಮತ್ತಿತರರು ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಗೌರವಿಸಿ ಶುಭಕೋರಿದ ಸಂದರ್ಭದಲ್ಲಿ ಪ್ರೀತಿಯಿಂದ ಬಹಳ ಜನಪ್ರಿಯ ಜಾನಪದ ಗೀತೆಯನ್ನು ಹಾಡಿ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕನ್ನಡ ಜಾನಪದ ಪರಿಷತ್ ಜೊತೆಯಲ್ಲಿರುವೆ ಎಂದು ಈ ಸಂದರ್ಭದಲ್ಲಿ ಹೇಳಿದರು.