ಇತ್ತೀಚಿಗೆ ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಸಾಧಕ ಶ್ರೇಷ್ಠ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ಜರುಗಿತು.
ಬೆಂಗಳೂರು ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠದ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ “ಇಂದು ಸಂಜೆ” ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಶ್ರೀಮತಿ ಡಾ.ಜಿ.ಎಸ್.ಪದ್ಮ ನಾಗರಾಜ್ , ಪದ್ಮಶ್ರೀ ಪ್ರಶಸ್ತಿ ವಿಜೇತರು, ನಿಮಾನ್ಸ್ ನ ನಿವೃತ್ತ ನಿರ್ದೇಶಕರು,
ಖ್ಯಾತ ಮನೋವೈಧ್ಯರೂ ಆದ ಡಾ. ಸಿ.ಆರ್ ಚಂದ್ರಶೇಖರ್ ಅವರು ಮಾತನಾಡಿ ಪತ್ರಕರ್ತರು ಕೂಡ ಮನುಷ್ಯರೇ ಸಣ್ಣ ಮತ್ತು ಮಧ್ಯಮ ಪತ್ರಕರ್ತರು ತಮ್ಮ ನಿಯತಕಾಲಿಕ ಪತ್ರಿಕೆಗಳನ್ನ ಹೊರ ತರಲು ಹರಸಾಹಸ ಪಡುತ್ತಿದ್ದಾರೆ ಸರ್ಕಾರ ಇಂತಹ ಸಣ್ಣ ಮತ್ತು ನಿಯತಕಾಲಿಕ ಪತ್ರಿಕೆಗಳ ಸಂಪಾದಕರುಗಳಿಗೆ ನೆರವು ನೀಡಬೇಕಾಗಿದೆ ಹಾಗೂ ವರದಿಗಾರರಿಗೆ ಸರ್ಕಾರ ಬೆಂಬಲ ನೀಡಬೇಕಾಗಿದೆ ಪತ್ರಿಕೆಗಳಲ್ಲಿ ಬರುವ ವಿಷಯಗಳನ್ನು ಅತ್ಯಂತ ಸ್ವಚ್ಛ ಮತ್ತು ಸುಂದರವಾಗಿ ಬರೆದು ಓದುಗರ ಮೆಚ್ಚಿಗೆ ಕಾರಣವಾಗುವ ಪತ್ರಿಕೆಗಳು ಅದರ ಹಿಂದೆ ಅನೇಕ ಕಷ್ಟ ಕಾರ್ಪಣ್ಯಗಳು ಕೂಡ ಇರುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸಚಿವ ಶ್ರೀಧರ್, ಜಗಳೂರು ಲಕ್ಷ್ಮಣರಾವ್,ಡಿಜಿ ಸಂಪತ್ ಮತ್ತು ಎಚ್ ಕೆ ಲಕ್ಷ್ಮಿ ನರಸಿಂಹ, ಸೇರಿದಂತೆ ಹಂಸಲೇಖ ಪತ್ರಿಕೆ ಸಂಪಾದಕರು, ಸಂಘದ ಗೌರವಾಧ್ಯಕ್ಷರೂ ಆದ ಜಿ ರಾಮಾಚಾರ್ ಉಪಸ್ಥಿತರಿದ್ದರು. ಹಾಗೂ ಸಂಘದ ಪದಾಧಿಕಾರಿಗಳಾದಈ.ಎಸ್.ವಿಶ್ವನಾಥ್, ಬಿ.ಆರ್ ನಾಗರಾಜ್,ಅಶೋಕ್ ಪಾಟೀಲ್, ಸಾಗರ್,ಗಿರಿಜಾ ದಯಾನಂದ,ಲಲಿತಾ,ತಾರಾ ನಟರಾಜ್,ರಮೇಶ್ ಬಾಬು ,ಸಿದ್ದಪ್ಪಾಜಿ.ಪಿ,ಉಮೇಶ್ ಯಲಹಂಕ, ಚಿಕ್ಕೆಗೌಡ,ಸೇರಿದಂತೆ ಹಲವರು ಭಾಗಿಯಾಗಿದ್ದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯ ಅಧ್ಯಕ್ಷ ಕೆ ಗೋಪಾಲ್ ವಹಿಸಿಸಿಕೊಂಡಿದ್ದರು. ಪತ್ರಕರ್ತ ಹಾಗೂ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮೌರ್ಯ ಪೂಜಾರಿ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.