ಬೆಂಗಳೂರು: ದಿನಾಂಕ 11 -8 -2024 ಭಾನುವಾರದಂದು ಮುಳಬಾಗಿಲುನಲ್ಲಿ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಮುಳಬಾಗಿಲಿನ ಘಟಕದ ಪತ್ರಿಕಾ ಭವನ ಉದ್ಘಾಟನೆ ಹಾಗೂ ಡಿ.ವಿ.ಜಿ. ಕನ್ನಡ ಗಡಿ ಭವನದಲ್ಲಿ 6ನೇ ವರ್ಷದ ಪತ್ರಿಕಾ ದಿನಾಚರಣೆಯ ಸುಂದರ ಸಮಾರಂಭ ಅದ್ದೂರಿಯಾಗಿ ಜರುಗಿತು.
ಮುಳಬಾಗಿಲು ಘಟಕದ ಪತ್ರಿಕಾ ಭವನವನ್ನು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಮೃದ್ಧಿ ಮಂಜುನಾಥ್ ಉದ್ಘಾಟಿಸಿ ಮಾತನಾಡಿ ಕೇರಾ ಮುಳುಬಾಗಿಲು ಘಟಕದ ಪತ್ರಕರ್ತರ ಕಾರ್ಯಕ್ಷಮತೆಯನ್ನು ಶ್ಲಾಘಿಸಿ, ಇನ್ನೂ ಹೆಚ್ಚು ಸಾಧನೆ ಮಾಡಬೇಕೆಂದರು. ಮತ್ತು ತಮ್ಮೆಲ್ಲರ ಕೆಲಸಗಳಿಗೂ ನನ್ನ ಸಹಕಾರ ಸದಾ ಇರುತ್ತದೆಂದರು.ಘಟಕದ ಪದಾಧಿಕಾರಿಗಳು ನೀಡಿದ ಶಾಶ್ವತ ಪತ್ರಿಕಾ ಭವನದ ಮನವಿಯನ್ನು ಪುರಸ್ಕರಿಸಿ, ಶಾಶ್ವತ ಪತ್ರಿಕಾಭವನವನ್ನು ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ಕೋಲಾರ ಜಿಲ್ಲಾಧ್ಯಕ್ಷರಾದ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದರೆ, ನಿಕಟಾಪೂರ್ವ ಕೇರಾ ರಾಜ್ಯಾಧ್ಯಕ್ಷರಾದ ಕಲಾವಿದ ವಿಷ್ಣು ಅವರು ಪ್ರಸ್ತಾವಿಕ ನುಡಿಗಳನ್ನಾಡಿ ಸಂಘ ನಡೆದು ಬಂದ ದಾರಿ ಸಂಘಕ್ಕೆ ಶ್ರಮಿಸಿದವರನ್ನುಸ್ಮರಿಸಿ, ಸಂಘದ ಏಳುಬೀಳುಗಳನ್ನು ಬಿಡಿಸಿಟ್ಟು, ಸಂಘವು ಪತ್ರಕರ್ತರ ಪ್ರಗತಿಯತ್ತ ದಾಪುಗಾಲು ಹಾಕಿದೆಯೆಂದು, ಮುಳಬಾಗಿಲು ಪತ್ರಕರ್ತರ ಸಾಧನೆಯನ್ನು ಶ್ಲಾಘಿಸಿ, ಮುಳುಬಾಗಿಲು ಪತ್ರಕರ್ತರಿಗೆ ಶಾಶ್ವತ ಪತ್ರಿಕಾ ಭವನ ಘೋಷಿಸಿದ ಶಾಸಕ ಸಮೃದ್ಧಿ ಮಂಜುನಾಥ್ ರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಕೇರಾ ರಾಜ್ಯಾಧ್ಯಕ್ಷರಾದ ಜಿ. ನಾಗರಾಜ್, ಉಪಾಧ್ಯಕ್ಷರಾದ ಸಿದ್ದಪ್ಪ ನೇಗಲಾಲ, ಪ್ರಧಾನ ಕಾರ್ಯದರ್ಶಿ ಇ.ಎಸ್ ವಿಶ್ವನಾಥ್, ಕಾರ್ಯದರ್ಶಿ ಚೇತನ್ ಬಾಬು, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಉಮೇಶ್, ಇನ್ನಿತರ ಜಿಲ್ಲೆಗಳ ಅಧ್ಯಕ್ಷರು ಅಧಿಕಾರಿಗಳು, ಮುಂತಾದವರು ಆಗಮಿಸಿ ವೇದಿಕೆ ಅಲಂಕರಿಸಿದ್ದರು.
ಘಟಕದ ಪದಾಧಿಕಾರಿಗಳು ವೇದಿಕೆ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು ಮತ್ತು ಪತ್ರಕರ್ತರಿಗೆ ಜಿಲ್ಲಾ ಪ್ರಶಸ್ತಿ ನೀಡಿ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಿದರು. ವಿಶೇಷ ಆಹ್ವಾನಿತರಿಗೆ ಅಭಿನಂದಿಸಿದರು. ಜಿಲ್ಲಾ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಕೋಲಾರ ಜಿಲ್ಲೆಯ ಜೆ ಆಲ್ಬರ್ಟ್ ಮನೋರಾಜ್, ಕೆಜಿಎಫ್ ನ ಡಾ. ಜಿ. ಜಯಂತಿ, ಮುಳಬಾಗಿಲಿನ ಜಗದೀಶ್, ಬಂಗಾರಪೇಟೆಯ ಟೈಗರ್ ಮಂಜುನಾಥ್, ಶ್ರೀನಿವಾಸಪುರದ ಜಗದೀಶ್ ಕುಮಾರ್ ಅವರಿಗೆ ಪ್ರಶಸ್ತಿಗಳನ್ನಿತ್ತು ಪುರಸ್ಕರಿಸಿ, ವಿವಿಧ ಕ್ಷೇತ್ರಗಳ ಸಾಧಕರಾದ ಕೋಲಾರದ ರುಮಾನ ಕೌಸರ್, ಮುಳಬಾಗಿಲಿನ ನಾಗರಾಜ್, ಬಂಗಾರಪೇಟೆಯ ಶ್ರೀಮತಿ ಜಿ. ನಿವೇದ, ಶ್ರೀನಿವಾಸಪುರದ ಹೂವಳ್ಳಿ ಅಂಬರೀಶ್, ಕೆಜಿಎಫ್ ನ ಪ್ರಕಾಶ್ ಅವರನ್ನು ಪ್ರೀತಿಪೂರ್ವಕವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಳಬಾಗಿಲು ತಾಲ್ಲೂಕು ಘಟಕದ ಅಧ್ಯಕ್ಷರಾದ ವಿ. ಚಲಪತಿ, ಗೌರವಾಧ್ಯಕ್ಷ ಕೇಸರಿ ಶಂಕರ್, ಪ್ರಧಾನ ಕಾರ್ಯದರ್ಶಿ ಸೈಯದ್ ಝಲ್ಪೀಕರ್, ಖಜಾಂಚಿ ಎಸ್.ಕೆ.ಪ್ರವೀಣ್, ಸಹ ಕಾರ್ಯದರ್ಶಿ ಜಗದೀಶ್, ಮತ್ತಿತರ ಸದಸ್ಯರು ಹಾಗೂ ಕೋಲಾರ ಜಿಲ್ಲಾ ಘಟಕದ ಪದಾಧಿಕಾರಿಗಳು, ಶ್ರೀನಿವಾಸಪುರ ತಾಲ್ಲೂಕು ಘಟಕದ ಪದಾಧಿಕಾರಿಗಳು, ಬಂಗಾರಪೇಟೆ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕೆಜಿಎಫ್ ತಾಲ್ಲೂಕು ಘಟಕದ ಪದಾಧಿಕಾರಿಗಳು, ಮಾಲೂರು ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.