ಬೆಳಗಾವಿ: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪದ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಸಚಿವ ಹೆಚ್ಕೆ ಪಾಟೀಲ್ ಮಧ್ಯೆ ಭಗವದ್ಗೀತೆ ಶ್ಲೋಕಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮಾತು ಆರಂಭಿಸಿದ ಅಶೋಕ್, ಅಂತೂ ಇಂತು 4 ದಿನ ಆದಮೇಲೆ ನಮಗೆ ಮಾತನಾಡಲು ಅವಕಾಶ ಕೊಟ್ಟಿದ್ದೀರಿ. ಅದೂ ಕೂಡ ಹೊಡೆದಾಟ, ಹೋರಾಟ ಮಾಡಿದ ಮೇಲೆ. ಧನ್ಯವಾದ ಎಂದರು.
ಮಾತು ಮುಂದುವರಿಸಿ, ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಎನ್ನುವ ಹಾಗೆ ಆಯ್ತು ನಮ್ಮ ಪರಿಸ್ಥಿತಿ. ಹೋರಾಟ ಮಾಡಿ ಮಾತನಾಡಲು ಅವಕಾಶ ಪಡೆಯುವಂತಾಯ್ತು. ಭಗವದ್ಗೀತೆಯಲ್ಲಿ ಒಂದು ಮಾತಿದೆ. ಮದವೇರಿದಾಗ ಒಂದು ಗಂಟೆ ಸ್ಮಶಾನಕ್ಕೆ ಸುತ್ತು ಹಾಕಿ ಬರಬೇಕಂತೆ. ಅಲ್ಲಿಗೆ ಹೋದಾಗ ಯಾರೆಲ್ಲ ಯಾವಾಗ ಯಾವ ರೀತಿ ಮೆರೆದಿದ್ದರೋ ಅವರೆಲ್ಲ ಏನಾದರು ಎಂಬುದು ಅರಿವಿಗೆ ಬರುತ್ತದೆ. ಆಗ ನಮ್ಮ ಮದ ಇಳಿಯುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಕೆ ಪಾಟೀಲ್, ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂದೂ ಭಗವದ್ಗೀತೆಯಲ್ಲಿ ಹೇಳಿದ್ದಾರೆ ಎಂದರು.