ಬೆಂಗಳೂರು: ಪೀಣ್ಯ ಪೊಲೀಸರು ಕಾನೂನು ಸಂಘರ್ಷ ಕೊಳಗದ ಇಬ್ಬರು ಬಾಲಕರನ್ನು ಬಂಧಿಸಿ ನಾಲ್ಕು ಲಕ್ಷ ರೂ ಬೆಲೆ ಬಾಳುವ ದ್ವಿಚಕ್ರ ವಾಹನ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಸುಮಾರು ಮೂರು ಪ್ರಕರಣಗಳನ್ನು ಭೇದಿಸುವಲ್ಲಿ ಪೀಣ್ಯಾ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಮಹದೇವಪುರ ಪೊಲೀಸರು ಅಜಯ್ ಎಂಬ ಆರೋಪಿಯನ್ನು ಬಂಧಿಸಿ ಸುಮಾರು ಸಾರ್ವಜನಿಕರನ್ನು ಅಡ್ಡಗಟ್ಟಿ ಚಾಕುವಿನಿಂದ ಬೆದರಿಸಿ ದರೋಡೆ ಮಾಡಿದ್ದ ೧೩ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ಮಹದೇವಪುರ ಪೊಲೀಸ್ ಠಾಣೆ ಒಂದು ಪ್ರಕರಣ ಹಾಗೂ ಇನ್ನೂ ೧೨ ಪ್ರಕರಣಗಳು ಪತ್ತೆ ಆಗಬೇಕೆಂದು ನಗರ ಪೊಲೀಸ್ ಆಯುಕ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು, ಸಾರ್ವಜನಿಕರು ದರೋಡೆಗೆ ಒಳಗಾಗಿದ್ದ ಪಕ್ಷದಲ್ಲಿ ಮಹದೇವಪುರ ಪೊಲೀಸರನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ವೈಟ್ಫೀಲ್ಡ್ ಪೊಲೀಸರು ಅಬ್ದುಲ್ ಎಂಬ ಆರೋಪಿಯನು ಬಂದಿಸಿ ೩೨ ದರೋಡೆ ಮಾಡಿದ್ದ ಮೊಬೈಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ನಾಲ್ಕುವರೆ ಲಕ್ಷ ಬೆಲೆಬಾಳುವ ಈಮೊಬೈಲ್ ಗಳಲ್ಲಿ ಒಂದು ಪ್ರಕರಣ ಪತ್ತೆಯಾಗಿ ಉಳಿದಂತ ಪ್ರಕರಣಗಳು ಪತ್ತೆಯಾಗಿಲ್ಲವೆಂದು ಮತ್ತು ಸಾರ್ವಜನಿಕರು ದರೋಡೆಗೆ
ಒಳಗಾಗಿದ್ದಾರೆ.
ವೈಟ್ಫೀಲ್ಡ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಆಯುಕ್ತರು ಕೋರಿಕೊಂಡರು.ಸೋಲದೇವನಹಳ್ಳಿ ಪೊಲೀಸರು ಸೊಹೇಬ್ ಪಾಷಾ ೩೦ ವರ್ಷ ಎಂಬ ಆರೋಪಿಯನ್ನು ಬಂಧಿಸಿ ೮ ಲಕ್ಷ ರೂ ಬೆಲೆ ಬಾಳುವ ೧೦೦ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.ಈತನು ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದನು ಎಂದು ತಿಳಿಸಿರುತ್ತಾರೆ.
ಮಾರತಳ್ಳಿ ಪೊಲೀಸರು ದಿವ್ಯ ಎಂಬ ಮನೆಯ ಕೆಲಸದಾಕೆಯನ್ನು ಬಂಧಿಸಿ ೩೦ ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಮತ್ತು ವಜ್ರಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.ಸುಮಾರು ಒಂದು ವರ್ಷಗಳ ಹಿಂದೆ ವಿಕ್ರಮ ವೈದ್ಯನಾಥ ಎಂಬುವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು ಮಾಲೀಕರಿಗೆ ಗೊತ್ತಿಲ್ಲದ ರೀತಿಯಲ್ಲಿ ಕಳವು ಮಾಡಿದ್ದರೂ ಎಂದು ಮಾರತಳ್ಳಿ ಪೊಲೀಸರು ತಿಳಿಸಿರುತ್ತಾರೆ.
ರಾಮೂರ್ತಿನಗರ ಪೊಲೀಸರು ಶ್ರೀನಿವಾಸ್ ಎಂಬ ಆರೋಪಿಯನ್ನು ಬಂದಿಸಿ ಒಂದುವರೆ ಲಕ್ಷ ರೂಬೆಲೆ ಬಾಳುವ ನಾಲಕ್ಕು ಲ್ಯಾಪ್ಟಾಪ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.ಈತನು ರಾಮಮೂರ್ತಿನಗರದಲ್ಲಿರುವ ಪೈ ಇಂಟರ್ನ್ಯಾಷನಲ್ ಎಂಬ ಅಂಗಡಿಯಲ್ಲಿ ಕಳವು ಮಾಡಿದ್ದನು.