ಬೆಂಗಳೂರು : ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ, ಮನೆ ಕೆಲಸದಾಕೆಯ, ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ಸರಗಳ ತನ ಮತ್ತು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದ ಒಟ್ಟು ೧೨ ಜನ ಆರೋಪಿಗಳನ್ನು ಆರು ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂಧಿಸಿ ಅಂದಾಜು ಸುಮಾರು ಒಂದುವರೆ ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಷ್ಠಿತ ಹಳೆಯ ಮಲ್ಲೇಶ್ವರಂ ನ ಸಂಪಿಗೆ ಚಿತ್ರಮಂದಿರದ ಮಾಲೀಕರ ಮನೆಯಲ್ಲಿ ಕಳವು ಮಾಡಿದ್ದ ಒಂದು ಕೋಟಿ ಹನ್ನೆರಡು ಲಕ್ಷದ ೨೬ ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ನೇಪಾಳ ಮೂಲದ ಆರೋಪಿಗಳಾದ ಪ್ರಕಾಶ್ ಸಾಯಿ ೪೬ ವರ್ಷ, ಅಫೀಲ್ಸಾಯಿ ೪೧ ವರ್ಷ ಮತ್ತು ಜಗದೀಶ್ ೩೯ ವರ್ಷ ಆರೋಪಿಗಳನ್ನು ಬಂಧಿಸಿರುತ್ತಾರೆ. ಮತ್ತೊಂದು ಪ್ರಕರಣದಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ನಾಗರಾಜು ಎಂಬ ಆರೋಪಿಯನ್ನು ಬಂಧಿಸಿ ೨೫ ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಎರಡುವರೆ ಲಕ್ಷ ಪಡಿಸಿಕೊಂಡಿರುತ್ತಾರೆ.
ಮತ್ತೊAದು ಪ್ರಕರಣದಲ್ಲಿ ಸುಬ್ರಮಣ್ಯಪುರ ಪೊಲೀಸರು ಜಿವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ಲಿಖಿತ್ ೨೫ ವರ್ಷ ಆರೋಪಿಯನ್ನು ಬಂಧಿಸಿ ೯ ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿರುತ್ತಾರೆ. ಕೋಣನಕುಂಟೆ ಪೊಲೀಸರು ಮನೆ ಕೆಲಸ ಮಾಡುತ್ತಿದ್ದ ಮನೆ ಕೆಲಸದಕೆ ಸೋನಿಯಾ ಎಂಬಾತಳನ್ನು ಬಂಧಿಸಿ ೧೨ ಲಕ್ಷ ರೂ ಬೆಲೆ ಬಾಳುವ ೧೦೦ ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿರುತ್ತಾರೆ.
ಮಲ್ಲೇಶ್ವರಂ ಪೊಲೀಸರು ಸರಗಳ್ ತನ ಮತ್ತು ಮನೆಗಳತನಹಳ್ಳಿ ಇಬ್ಬರು ಚೇತನ್ ಕುಮಾರ್ ಮತ್ತು ಪಂಚಾಕ್ಷರಿ ಆರೋಪಿಗಳನ್ನು ಬಂಧಿಸಿ ನಾಲಕ್ಕು ವರೆ ಲಕ್ಷ ರೂ ಬೆಲೆ ಬಾಳುವ ೬೦ ಗ್ರಾಂ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿರುತ್ತಾರೆ.
ಬಗಲಗುಂಟೆ ಪೊಲೀಸರು ಸಾರ್ವಜನಿಕರ ಬಳಿ ಸುಲಿಗೆ ಮಾಡುತ್ತಿದ್ದ ಅಭಿಷೇಕ್ ಗಯಾಜ್ ಪಾಷಾ ಭರತ್ ಕುಮಾರ್ ಮತ್ತು ಶ್ರೇಯಸ್ ಇವರುಗಳನ್ನು ಬಂಧಿಸಿ ೩,೦೦,೦೦೦ ಬೆಲೆಬಾಳುವ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನ ಮತ್ತು ಮೂರು ಐ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.