ಈ ವರ್ಷ ಮಾಜಿ ಪ್ರಧಾನಿ ದಿವಂಗತ ಅಟಲ ಬಿಹಾರಿ ವಾಜಪೇಯಿಯವರ 100ನೇ ವರ್ಷದ ಜನ್ಮದಿನ ಶತಮಾನೋತ್ಸವವನ್ನು ಆಚರಿಸುತ್ತಲಿದ್ದೇವೆ. ದಿವಂಗತ ಅಟಲ ಬಿಹಾರಿ ವಾಜಪೇಯಿಯವರನ್ನು ಪತ್ರಕರ್ತ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರಾಜಕಾರಣಿ ಎಂಧೇ ಗುರುತಿಸಲಾಗಿದೆ. ಆದರೆ ಅವರಲ್ಲಿ ಒಬ್ಬ ಆಶಾವಾದಿ ಕವಿ ಕೂಡ ಇದ್ದ ಎನ್ನುವುದು ಬಹಳ ಹೆಮ್ಮೆಯ ವಿಷಯ.
ಮಧ್ಯ ಪ್ರದೇಶದ ಗ್ವಾಲಿಯರ್ನಗರದ ಕನ್ಯಾಕುಬ್ಜ ಬ್ರಾಹ್ಮಣ ಮನೆತನದಲ್ಲಿ ಜನಿಸಿದರು. ಅನೇಕ ವಾಜಪೇಯ ಯಾಗಗಳನ್ನು ಮಾಡಿ ಪುಣ್ಯಗಳಿಸಿದ ಕುಟುಂಬದ ಅಡ್ಡ ಹೆಸರು ವಾಜಪೇಯಿ ಎಂದು ಬಂದಿತ್ತು. ಇವರ ತಂದೆ ಕೃಷ್ಣ ಬಿಹಾರಿ ವಾಜಪೇಯಿಯವರು ಅವರ ತಾಯಿ ಕೃಷ್ಣಾದೇವಿಯವರು. ಅಟಲ ಜೀ 4 ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಲ್ಲಿ ಎಲ್ಲರಿಗಿಂತ ಕಿರಿಯರು. ಅಟಲ್ ಜಿಯವರ ಜನ್ಮ 25 ಡಿಸೆಂಬರ್ 1924ರಲ್ಲಿ ಆಯಿತು. ಬಾಲ್ಯದಿಂದಲೂ ತಮ್ಮ ತಾತ ಶ್ಯಾಮಲಾಲರ ಪ್ರಭಾವದಿಂದ ಹೆಚ್ಚು ಸಮಯವನ್ನು ತಮ್ಮ ಮನೆಯ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು. ಅಟಲ್ ಜಿಯವರು ತಮ್ಮ ಬಿ.ಎ ಪದವಿಯನ್ನು ಗ್ವಾಲಿಯರ್ನಲ್ಲೂ ಎಂ.ಎ ಪದವಿಯನ್ನು ಕಾನ್ಪುರಲ್ಲಿಯೂ ಪೂರೈಸಿದರು.
ತಮ್ಮ ರಾಜಕೀಯ ಪಯಣವನ್ನು ಭಾರತೀಯ ಜನಸಂಘದ ಕಾರ್ಯಕರ್ತರಾಗಿ ಆರಂಭಿಸಿದ ಅಟಲ್ ಜೀ ಮೊಟ್ಟ ಮೊದಲ ಬಾರಿಗೆ 1977ರಲ್ಲಿ ಸಾಮಾನ್ಯ ಚುನಾವಣೆಯಲ್ಲಿ ಗೆದ್ದು ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿ ವಿಶ್ವ ಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಮೊಟ್ಟ ಮೊದಲ ಭಾರತೀಯರಾಗಿದ್ದಾರೆ. 1996ರಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರಕಾರದ ಪ್ರಧಾನ ಮಂಥ್ರಿಗಳಾಗಿ ನಂಥರ 1998ರಲ್ಲಿ ಪೂರ್ಣಾವಧಿಯ ಪ್ರಧಾನ ಮಂತ್ರಿಗಳಾದರು.
ರಾಜಕೀಯವಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿರುವ ಇವರು ಪ್ರಸಿದ್ಧ ಕವಿಗಳು ಕೂಡ ಆಗಿದ್ದರು. ಇವರ ಪ್ರಮುಖ ಕವಿತಾ ಸಂಕಲನಗಳಲ್ಲಿ ಕೈದಿ ಕವಿರಾಜ ಕೀ ಕುಂಡಲಿಯಾ, ಅಮರ್ ಆಗ್ ಹೈ, ಮೇರಿ ಇಕ್ಕಯಾವನ್ ಕಿವತಾಯೇ, ಕ್ಯಾ ಖೋಯಾ ಹೈ ಕ್ಯಾ ಪಾಯಾ ಹೈ, 21 ಪೋಯಮ್ಸ್, ಚಹುನಿ ಹುಯಿ ಕವಿತಾಯೇಗಳು ಪ್ರಮುಖವಾದರೆ ನ್ಯಾಷನಲ್ ಇಂಟಿಗ್ರೇಷನ್, ನ್ಯೂ ಡೈಮೆನ್ಷನ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ, ಘಟಬಂಧನ್ ಕೀ ರಾಜನೀತಿ, ಬಿಂದು ಬಿಂದು ವಿಚಾರ್, ಡಿಸಿಸಿವ್ ಡೇಸ್, ಸಂಕಲ್ಪ ಕಾಲ್, ವಿಚಾರ ಬಿಂದು, ನ ದಯನಿಯಮ್ ಪಲಾಯನಮ್ , ನಯೀ ಚುನೋತಿಯಾ ನಯಾ ಅವಸರ್ ಮತ್ತು ಇಂಡಿಯಾಸ್ ಪರ್ ಸೆಪ್ಟಿವ್ಸ್ ಆನ್ ಆಸಿಯಾನ್ ಆಂಡ್ ಏಷಿಯಾ ಫೆಸಿಫಿಕ್ ರಿಜನ್ ಗದ್ಯ ಪುಸ್ತಕಗಳಾಗಿವೆ.
ರಾಷ್ಟ್ರವಾದಿ ಚಿಂತನೆ, ಭವ್ಯ ಭವಿಷ್ಯದ ಆಶಯ. ದೇಶಕ್ಕಾಗಿ ಒಟ್ಟಾಗಿ ಸೇರಿ8 ಕೆಲಸ ಮಾಡುವ ಹುಮ್ಮಸ್ಸು , ಸಾಮಾಜಿಕ ಚಿಂತನೆಗಳು ಇಂತಹ ಅನೇಕ ವಿಚಾರಗಳನ್ನು ಸರಳವಾದ ಭಾಷೆಯಲ್ಲಿ ಜನರ ಮನಮಟಟುವಂತೆ ತಲುಪಿಸಿದ ಜನ ಸಾಮಾನ್ಯರ ಕವಿ ವಾಜಪೇಯಿಯವರಾಗಿದ್ದಾರೆ. ವಾಜಪೇಯಿಯವರ ರಾಜಕೀಯ ಭಾಷಣಗಳು ಮಾತ್ರವಲ್ಲದೇ ಸಾಹಿತ್ಯಿಕ ಚಿಂತನೆಗಳು ಅವರ ರಚನೆಗಳು ಯುವ ಜನರ ಹೃದಯವನ್ನು ಮುಟ್ಟಿ ಅವರಲ್ಲಿ ನವಚೈತನ್ಯವನ್ನು ತುಂಬಿಸುವಷ್ಟು ಪರಿಣಾಮಕಾರಿಯಾಗಿದ್ದವು. ಅವರ ಕೆಲವು ಮಾತುಗಳು ಕವನಗಳು ಬಹಳ ಪರಿಣಾಮಕಾರಿಯಾಗಿದ್ದು ಮನುಷ್ಯರಲ್ಲಿ ಪ್ರಯತ್ನಶೀಲರಾಗಿ ನಡೆಯುವ ಪ್ರೇರಣೆಯಮನ್ನು ನೀಡುತ್ತವೆ.
“ಆವೋ ಫಿರ್ ಸೇ ದಿಯಾ ಜಲಾಯೇ” ಕವಿತೇ, “ದಾವ್ ಪರ್ ಪರ್ ಸಬ್ ಕುಛ್ ಲಗಾ ಹೈ, ರುಕ್ ನಹೀ ಸಕತೇ, ಟೂಟ್ ಸಕತಾ ಹೈ, ಮಗರ್ ಹಮ್ ಝುಕ್ ನಹೀ ಸಕತೆ”, “ಭಾಧಾಯೇ ಆತೀ ಹೈ? ಮೊದಲಾದ ಇವರ ಕವಿಯೇ ಸಾಲುಗಳು ಎಷ್ಟೋ ಜನರಿಗೆ ಪ್ರೇರಣೆಯನ್ನು ನೀಡುತ್ತಿವೆ. “ಅಂಧೇರಾ ಹಟೆಗಾ ಸೂರಜ್ ಕಾ ಕಿರಣ್ ಆಯೆಗಾಔರ್ ಕಮಲ್ ಖಿಲೇಗಾ” ಎಂಬ ಅವರ ವಿಶ್ವಾಸದ ಮಾತು ಇಂದಿಗೂ ಪ್ರಸ್ತುತ ರಾಜಕೀಯ ಪಕ್ಷವೊಂದರ ಆರಂಭದಿಂದಲೂ ಇದ್ದು ಎರಡೇ ಸೀಟಿನಿಂದ ಆರಂಭಿಸಿ ತಮ್ಮ ಸರಕಾರ ಆಗುವವರೆ ತಮ್ಮ 93ನೇ ವಯಸ್ಸಿನಲ್ಲಿ ಸಾಯುವರೆಗೂ ತಮ್ಮ ಸಿದ್ಧಾಂತದಲ್ಲಿ ದೃಢ ವಿಶ್ವಾಸವಿಟ್ಟು ಬದುಕಿದ ಮಹಾನ್ ನಾಯಕನಿಗೆ ಕವಿಗೆ ನಮನ.
-ಮಾಧುರಿ ದೇಶಪಾಂಡೆ, ಬೆಂಗಳೂರು