ಬೆಂಗಳೂರು: ಬೆಂಗಳೂರು ನಗರ ಪಶ್ಚಿಮ ಮತ್ತು ದಕ್ಷಿಣ ವಿಭಾಗದ ಸಂಚಾರಿ ಪೊಲೀಸರು ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಮಹಾನಗರ ಪಾಲಿಕೆಯ ಕಸ ತುಂಬುವ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 134 ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತಾರೆ.ದಕ್ಷಿಣ ವಿಭಾಗದ ಪೊಲೀಸರು 83 ಪ್ರಕರಣಗಳನ್ನು ಮತ್ತು ಪಶ್ಚಿಮ ವಿಭಾಗದ ಪೊಲೀಸರು 51 ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತಾರೆ.
ಮತ್ತು ನೀರಿನ ಟ್ಯಾಂಕರ್ ಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ 197 ಪ್ರಕರಣಗಳನ್ನು ದಕ್ಷಿಣ ವಿಭಾಗದವರು ಮತ್ತು ಪಶ್ಚಿಮ ವಿಭಾಗದವರು 62, ಒಟ್ಟು 259 ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತಾರೆ.ಪಶ್ಚಿಮ ವಿಭಾಗದ ಪೊಲೀಸರು 1,49,700 ದಂಡ ವಿಧಿಸಿರುತ್ತಾರೆ ಮತ್ತು ತಕ್ಷಣ ವಿಭಾಗದ ಪೊಲೀಸರು ಮೋಟರ್ ಸೈಕಲ್ ಆಕ್ಟ್ 1998ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.