ನವದೆಹಲಿ: ಕೇರಳದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಅಧ್ಯಕ್ಷರನ್ನೇ ಹೊರಗಟ್ಟಿತು ನಕಲಿ ಗಾಂಧಿ ಕುಟುಂಬ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ವಯನಾಡಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಹೈ ಕಮಾಂಡ್ ಮಲ್ಲಿಕಾರ್ಜುನ್ ಖರ್ಗೆ ಅವರನ್ನೇ ಹೊರಗೆ ಕಳಿಸುವ ಮೂಲಕ ತಮ್ಮ ನಡೆ ಏನೆಂಬುದನ್ನು ತೋರ್ಪಡಿಸಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.ದಲಿತ ನಾಯಕನಿಗೆ ಅವಮಾನ ಆದ್ರೂ ಸಹನೆ: ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ನಿಷ್ಠಾವಂತ, ಹಿರಿಯ ದಲಿತ ನಾಯಕನಿಗೆ ಅವಮಾನ ಮಾಡಿದರೂ ಸಹನೆಯೇ ಎಂದು ಪ್ರಶ್ನಿಸಿದ್ದಾರೆ ಪ್ರಲ್ಹಾದ ಜೋಶಿ.
ನಕಲಿ ಗಾಂಧಿ ಕುಟುಂಬದ ಜೊತೆ ಬೆರೆಯಬೇಕೆಂದರೆ ಸ್ವತಃ ಕಾಂಗ್ರೆಸ್ ಅಧ್ಯಕ್ಷರೇ ಕ್ಯೂನಲ್ಲಿ ನಿಲ್ಲಬೇಕು. ಇದು ಇಂದಿನ ಗಾಂಧಿಯೇತರ ಕಾಂಗ್ರೆಸ್ಸಿಗರ ಸ್ಥಿತಿ ಎಂದಿದ್ದಾರೆ ಜೋಶಿ.ಪಕ್ಷದ ಹಿರಿಯ ನಾಯಕ ಖರ್ಗೆ ಅವರನ್ನು ಕಾಂಗ್ರೆಸನ ನಕಲಿ ಗಾಂಧಿ ಕುಟುಂಬ ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದಿದ್ದಾರೆ ಪ್ರಲ್ಹಾದ ಜೋಶಿ.