ಮೈಸೂರು: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರುವ ಬಗ್ಗೆ ಒಲವು ಹೊಂದಿದ್ದಾರೆ ಎಂಬ ವದಂತಿಗಳ ಬಗ್ಗೆ ಖುದ್ದು ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ಈ ಈತರ ಊಹಾಪೋಹಗಳನ್ನು ಮಾಡುವವರಿಗೆ ನಾನು ಒಂದು ಮಾತು ಹೇಳುತ್ತೇನೆ, ಪ್ರತಾಪ್ ಸಿಂಹ ಕಾಂಗ್ರೆಸ್ಸಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲ ಎಂದರು.
ನನ್ನ ತಂದೆಯೂ ಜನಸಂಘದವರು, ಪ್ರತಾಪ್ ಸಿಂಹ ಕೂಡ ಎಂದಿಗೂ ಬಿಜೆಪಿಯಲ್ಲಿಯೇ ಇರುತ್ತಾನೆ. ನಮ್ಮದು ಸೈದ್ಧಾಂತಿಕ ಬದ್ಧತೆ ಇರುವ ಪಕ್ಷ. ಕಾಂಗ್ರೆಸ್ಗೆ ಹೋಗಬೇಕು ಎಂದಿದ್ದರೆ ಚುನಾವಣೆ ಸಂದರ್ಭದಲ್ಲಿಯೇ ಹೋಗಬಹುದಿತ್ತಲ್ಲವೇ? ಆ ಪಕ್ಷದಿಂದ ಯಾರ್ಯಾರು ನನಗೆ ಫೋನ್ ಮಾಡಿ ನನಗೆ ಟಿಕೆಟ್ ಆಫರ್ ಮಾಡಿದ್ದರು ಅವರ ಬಳಿ ಕೇಳಿ ನೋಡಿ. ಹೋಗುವುದಿದ್ದರೆ ಆಗಲೇ ಹೋಗುತ್ತಿದ್ದೆ ಎಂದರು.