ಹುಬ್ಬಳ್ಳಿ: ಕಾಂಗ್ರೆಸ್ಸಿನ ಢೋಂಗಿ ಜಾತ್ಯಾತೀತತೆ ಮತ್ತು ಮುಸ್ಲಿಂ ತುಷ್ಟೀಕರಣದಿಂದಾಗಿ ಮುಜರಾಯಿ ದೇವಸ್ಥಾನಗಳ ಒಂದೇ ಒಂದು ಇಂಚು ಜಾಗವೂ ಜಾಸ್ತಿಯಾಗಿಲ್ಲ; ಬದಲಿಗೆ ಎಲ್ಲಾ ವಕ್ಫ್ ದ್ದೇ ಆಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ದೊಡ್ಡ ಆದಾಯವುಳ್ಳ ದೇವಸ್ಥಾನಗಳ ಕಂಟ್ರೋಲ್ ಅನ್ನು ರಾಜ್ಯ ಸರ್ಕಾರವೇ ಇರಿಸಿಕೊಂಡಿದೆ ಎಂದು ಹೇಳಿದರು.
ಅನೇಕ ದೊಡ್ಡ ದೊಡ್ಡ ದೇವಸ್ಥಾನಗಳ ಆಡಳಿತ, ಕಂಟ್ರೋಲ್ ರಾಜ್ಯ ಸರ್ಕಾರದ ಬಳಿ, ಮುಜರಾಯಿ ಇಲಾಖೆ ಬಳಿ ಇದೆ. ಈ ದೇಗುಲಗಳ ಆಸ್ತಿಯೇ ಒಂದಿAಚೂ ಹೆಚ್ಚಿಲ್ಲ. ಹೀಗಿರುವಾಗ ವಕ್ಫ್ ಗೆ ಹೇಗೆ ಆಸ್ತಿ ಹೋಗುತ್ತದೆ?, ಅದರ ಆಸ್ತಿ ಹೇಗೆ ಹೆಚ್ಚುತ್ತದೆ? ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಈ ದೇಶದ ದೇವಸ್ಥಾನಗಳು ಸಾವಿರಾರು ವರ್ಷಗಳಿಂದ ಇವೆ. ಹಿಂದೂ ಧರ್ಮವಾಗಲಿ ಅಥವಾ ಭಾರತೀಯ ಯಾವುದೇ ಧರ್ಮವಾಗಲಿ ಹುಟ್ಟಿದಾಗ ದೇಶದೊಳಗೆ ಇಸ್ಲಾಂ ಇರಲೇ ಇಲ್ಲ ಎಂದು ಹೇಳಿದರು.
ಸರ್ಕಾರದ್ದು ಮಾತ್ರವಲ್ಲ ಸುಪ್ರೀಂ ಕೋರ್ಟ್ ಕಂಟ್ರೋಲ್ ಸಹ ಇಲ್ಲ ಎಂದು ಹೇಳಿಕೊಳ್ಳುತ್ತಾರೆ ವಕ್ಫ್ ನ ಎಂದು ಸಚಿವ ಪ್ರಲ್ಹಾದ ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದರು.