ಮಳವಳ್ಳಿ: ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರದಬೃಹತ್ ಕೈಗಾರಿಕಾ ಸಚಿವರಾಗಿ ಆಯ್ಕೆಯಾಗಿ ರುವುದನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ ಮುಖಂಡರು ಅವರ ವಿರುದ್ಧ ಇಲ್ಲಸಲ್ಲದ ಆರೋಪ ಗಳನ್ನು ಮಾಡುತ್ತಿದ್ದರೆ ಎಂದು ಟೀಕಿಸಿರುವ ಜಿ ಪಂ ಮಾಜಿ ಸದಸ್ಯರು ಹಾಗೂ ಜೆಡಿಎಸ್ ನ ಯುವ ಘಟಕದ ಜಿಲ್ಲಾಧ್ಯಕ್ಷ ಬಿ. ರವಿ ಕಂಸಾಗರ ಇದೇ ರೀತಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದರೆ.
ಕಾಂಗ್ರೆಸ್ ಮುಖಂಡರ ವಿರುದ್ದು ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸ ಬೇಕಾಗುವುದು ಎಂದು ಎಚ್ಚರಿಸಿದ್ದಾರೆ.ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡುತ್ತಿದ್ದ ಅವರು ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾವೇರಿ ವಿವಾದವನ್ನು ಕೇವಲ ಒಂದುವರೆ ತಿಂಗಳ ಹಿಂದೆ ಸಂಸದರಾಗಿ ಕೇಂದ್ರ ಸಚಿವರಾಗಿರುವ ಹೆಚ್ ಡಿ ಕುಮಾರ ಸ್ವಾಮಿ ಅವರು ಬಗೆಹರಿಸ ಬೇಕು ಎಂದು ಅವರ ತಲೆಗೆ ಕಟ್ಟಲು ಹೊರಟಿರುವುದು ಕಾಂಗ್ರೆಸ್ ನಾಯಕರ ನೀಚ ರಾಜಕಾರಣದ ಪರಮಾವದಿ ಎಂದು ಟೀಕಿಸಿದರು.
ಕಾವೇರಿ ವಿಚಾರವಾಗಿ ಮುಖ್ಯ ಮಂತ್ರಿಗಳು ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಪೂರ್ವ ನಿಗಧಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿದ್ದರೂ ಸಹ ಕುಮಾರಸ್ವಾಮಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದರ ಜೊತೆಗೆ ಕುಮಾರಸ್ವಾಮಿ ಅವರ ಜನಸಂಪರ್ಕ ಸಭೆಗೆ ಅಧಿಕಾರಿ ಗಳು ಬಾರದಂತೆ ನಿರ್ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ನೀಚ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ರವಿ ಕಂಸಾಗರ ಕಿಡಿಕಾರಿದರು.
ವಿಧಾನ ಸಭಾ ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆ ಯನ್ನು ಮಾಡುವುದಾಗಿ ಪಾದಯಾತ್ರೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡ ಡಿ ಕೆ ಶಿವಕುಮಾರ್ ಅವರು ಈಗ ಮೇಕೆ ದಾಟು ಯೋಜನೆಯನ್ನು ಕುಮಾರಸ್ವಾಮಿ ಅವರ ಹೆಗಲಿಗೆ ಕಟ್ಟಲು ಕಾಂಗ್ರೆಸ್ ನಾಯಕರು ಹೊರಟಿದ್ದು ನಮ್ಮಿಂದಾಗದು ಎಂದು ಬಹಿರಂಗವಾಗಿ ಒಪ್ಪಿ ಕೊಳ್ಳಲಿ ಎಂದು ಸವಾಲು ಹಾಕಿದ ಅವರು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಅವರ ವಿರುದ್ದ ಏಕವಚನದಲ್ಲಿ ಮಾತ ನಾಡಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್ ಚಲುವರಾಯ ಸ್ವಾಮಿ ವರ್ತನೆಯನ್ನು ಖಂಡಿಸಿದರು.
ಜೆಡಿಎಸ್ ನಾಯಕರ ವಿರುದ್ಧ ಅನಗತ್ಯ ಆರೋಪಗ ಳನ್ನು ಕಾಂಗ್ರೆಸ್ ನಾಯಕರು ಮುಂದು ವರಿಸಿದಲ್ಲಿ ಅವರ ವಿರುದ್ಧ ಪ್ರತಿ ಭಟನೆ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಪಟ್ಟಣ ಘಟಕದ ಅಧ್ಯಕ್ಷ ಪ್ರಭು, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಬಿ.ಎಂ. ಕಾಂತರಾಜು, ಪುರಸಭಾ ಸದಸ್ಯರಾದ ಆರ್.ಎನ್. ಸಿದ್ದರಾಜು, ನಾಗೇಶ್, ನೂರುಲ್ಲಾ, ಮುಖಂಡರಾದ ಪೊತಂಡೆ ನಾಗರಾಜು, ಮೆಹಬೂ ಪಾಸ್, ರಾಜಣ್ಣ ಅಮೃತೇಶ್ವರನಹಳ್ಳಿ ಮತ್ತಿತರರು ಹಾಜರಿದ್ದರು.