ಹಾಸನ: ಕಾಂತಾರಾ 2 ಚಿತ್ರತಂಡದಿಂದ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಹಾನಿಯಾಗಲಿ, ಪರಿಸರ ಮಾಲಿನ್ಯವಾಗಲಿ ನಡೆದಿಲ್ಲ ಎಂದು ವರದಿ ಲಭ್ಯವಾಗಿದೆ.
ಸಕಲೇಶಪುರ ತಾಲೂಕಿನ ಗವಿಗುಡ್ಡ ಪ್ರದೇಶದಲ್ಲಿ ಕಾಂತಾರಾ 2 ಚಿತ್ರತಂಡದಿಂದ ಮರ ಕಡಿಯಲಾಗಿದೆ.
ಪರಿಸರಕ್ಕೆ ಹಾನಿಯುಂಟು ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದರು. ಈ ಸಂಬಂಧ ಪರಿಶೀಲನೆ ನಡೆಸಿದ್ದ ಸಕಲೇಶಪುರ ಎಸಿಎಫ್ ಹಾಗೂ ಯಸಳೂರು ಆರ್ಎಫ್ಒ ಅವರುಚಿತ್ರತಂಡದಿಂದ ಯಾವುದೇ ರೀತಿಯ ನಿಯಮ ಉಲ್ಲಂಘನೆ ಆಗಿಲ್ಲ. ಮರಗಳನ್ನು ಕಡೆದಿಲ್ಲ ಎಂದು ತಿಳಿಸಿದ್ದು, ಯಾವುದೇ ರೀತಿಯಪರಿಸರ ಮಾಲಿನ್ಯ ಉಂಟಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.