ಕನಕಪುರ: ಸಂಸ್ಥೆಗೆ ಕೆಟ್ಟ ಹೆಸರು ತರುವ ಏಕೈಕ ಉದ್ದೇಶದಿಂದ ಈ ಪ್ರಕರಣವನ್ನು ಕೆಲವರು ಬಳಸಿ ಕೊಂಡಿದ್ದಾರೆ ಎಂದುರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಹೆಚ್. ಕೆ. ಶ್ರೀಕಂಠು ತಿಳಿಸಿದರು.
ಸಂಸ್ಥೆಯಲ್ಲಿನ ಪದವಿ ಪೂರ್ವ ವಿದ್ಯಾರ್ಥಿ ಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ನಡೆದಿದೆ ಎನ್ನಲಾದ ಅಸಹ್ಯಕರ ಘಟನೆಯ ಹಿಂದೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಉಪನ್ಯಾಸಕರ ಕೈವಾಡವಿರುವುದು ಕಂಡು ಬಂದಿದ್ದು ಅಂತಹವರ ವಿರುದ್ಧ ಆಡಳಿತ ಮಂಡಳಿಶಿಸ್ತುಕ್ರಮ ಕೈ ಗೊಳ್ಳಲಿದೆ,ಪ್ರವಾಸದ ವೇಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮಧ್ಯಪಾನ ಮಾಡುವ ಮೂಲಕ ಅನುಚಿತ ವರ್ತನೆ ತೋರಿರುವ ಉಪನ್ಯಾಸಕರಾದ ವಿಶ್ವನಾಥ್, ನಾಗೇಶ್ ಹಾಗೂ ಲಕ್ಷ್ಮಿಶ್ರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದ್ದು ಘಟನೆಯ ಬಗ್ಗೆ ಕೂಲಂಕಷವಾಗಿ ಪರೀಶೀಲನೆ ನಡೆಸಿದ ನಂತರ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿರುವ ಈ ಸಂಸ್ಥೆಗೆ ಹೇಗಾದರೂ ಮಾಡಿ ಸಾರ್ವಜನಿಕ ವಲಯದಲ್ಲಿ ಕೆಟ್ಟ ಹೆಸರು ತರಬೇಕೆಂಬ ಆಶಯದಿಂದ ನಮ್ಮಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅರುಣ್ ,ಮಂಜು ಹಾಗೂ ಇನ್ನಿತರು ಸೇರಿ ಮೊದಲೇ ಯೋಜನೆ ಯನ್ನು ರೂಪಿಸಿ ಪ್ರವಾಸದ ವೇಳೆ ವಿದ್ಯಾರ್ಥಿಗಳು ಮನರಂಜನೆಗಾಗಿ ನೃತ್ಯ ಮಾಡುತ್ತಿದ್ದನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಿಕೊಂಡು ಸಂಸ್ಥೆಯ ಆಡಳಿತ ಮಂಡಳಿ ಗಮನಕ್ಕೆ ತರದೇ ಬೇನಾಮಿ ಹೆಸರಿನಲ್ಲಿ ಮಕ್ಕಳ ಆಯೋಗಕ್ಕೆ ದೂರು ಕೊಟ್ಟಿರುವುದು ನೋಡಿದಾಗ ಅವರ ದುರುದ್ದೇಶ ಅರ್ಥವಾಗುತ್ತದೆ,
ಈ ಪ್ರಕರಣದ ರೂವಾರಿಗಳ ವಿರುದ್ಧ ಈಗಾಗಲೇ ಹಲವು ದೂರು ಗಳಿದ್ದರೂ ಸಹ ನಾವು ಮಾನವೀಯತೆಯಿಂದ ಕಂಡು ಅವರನ್ನು ಸಾತನೂರು ಶಿಕ್ಷಣ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದರೂ ಅಲ್ಲೂ ಸಹ ಕೆಲಸವನ್ನು ಮಾಡದೇ ಸಹೋದ್ಯೋಗಿಗಳ ಜೊತೆ ಅನುಚಿತವಾಗಿ ನಡೆದು ಕೊಂಡಿರುವದನ್ನು ಗಮನಿಸಿ ಅವರನ್ನು ಈ ಕೂಡಲೇ ಕೆಲಸ ದಿಂದ ವಜಾ ಮಾಡಿರುವುದಾಗಿ ತಿಳಿಸಿದರು.
ಘಟನೆಯ ಬಗ್ಗೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯ ರಿಂದ ವಿವರಣೆಯನ್ನು ಪಡೆಯಲಾಗಿದ್ದು ಸಾಮಾಜಿಕ ಜಾಲ ಹಾಗೂ ಮಾಧ್ಯಮಗಳಲ್ಲಿ ಬಂದಂತಹ ಸುದ್ದಿಗಳಲ್ಲಿ ತಪ್ಪು ಮಾಹಿತಿ ಇದ್ದು ನಮ್ಮ ಜೊತೆ ಯಾವ ಶಿಕ್ಷಕರಾಗಲೀ, ಸಹಪಾಠಿಗಳಾಗ ಲೀ ಅಸಬ್ಯವಾಗಿ ವರ್ತನೆ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದು ಆದರೂ ಸಹ ಸಂಸ್ಥೆಯ ಆಡಳಿತ ಮಂಡಳಿಯು ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಈಗ ಆಗಿರುವ ಘಟನೆಗೆ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ತಾಲ್ಲೂಕಿನ ಸಾರ್ವಜನಿಕರಲ್ಲಿ ಕ್ಷಮೆ ಕೋರಿ ಮುಂದೆ ಈ ರೀತಿಯ ಘಟನೆಗಳು ಮರುಕಳಿಸ ದಂತೆ ಎಚ್ಚರ ವಹಿಸಿ ಪೂಜ್ಯ ಕರಿಯಪ್ಪ ನವರ ಹೆಸರಿಗೆ ಕಳಂಕ ತರುವ ಯಾವುದೇ ಕೆಲಸಕ್ಕೆ ಆಸ್ಪ ದ ನೀಡುವುದಿ ಲ್ಲವೆಂದು ಭರವಸೆ ನೀಡಿದರು.ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಬಿ. ನಾಗರಾಜು, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್, ಪ್ರಾಂಶುಪಾಲರಾದ ರುದ್ರೇಶ್,ದೇವರಾಜು, ಬಾಲಕೃಷ್ಣ, ಶಿಕ್ಷಕರಾದ ಪ್ರಸಾದ್, ಮಧು, ಮೋಹನ್, ಕೆಂಪೇಗೌಡ ಸೇರಿದಂತೆ ಉಪನ್ಯಾಸಕಿಯರು ಈ ವೇಳೆ ಉಪಸ್ಥಿತರಿದ್ದರು.