ಮಾಸ್ಕೊ: ರಷ್ಯಾದ ಬಾಕ್ಸರ್ ಇದ್ರಿಸ್ ಅಬ್ದುರ್ರಶೀದೊವ್ ಅವರಿಗೆ ಜೀವಿತಾವಧಿಯುದ್ದಕ್ಕೂ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಗಳಿಗೆ ನಿಷೇಧ ಹೇರಲಾಗಿದೆ. ಅಕ್ಟೋಬರ್ 20ರಂದು ಥಾಯ್ಲೆಂಡ್ನ ಫುಕೆಟ್ನಲ್ಲಿ ನಡೆದ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎದುರಾಳಿಯ ಮೇಲೆ ನಿಷೇಧಿತ ಹೆಡ್ಕಿಕ್ ಪ್ರಹಾರ ನಡೆಸಿದ ಆರೋಪದಲ್ಲಿ ಇದ್ರಿಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
21 ವರ್ಷದ ಇದ್ರಿಸ್ 4-0 ಗೆಲುವಿನ ದಾಖಲೆ ಹೊಂದಿದ್ದು, ಮಿಶ್ರ ಸಮರ ಕಲೆಯಲ್ಲಿ ಅಜೇಯರಾಗಿಉಳಿದಿದ್ದರು. ಎಂಎಂಎಯಲ್ಲಿ ಎದುರಾಳಿಗಳನ್ನು ಹೊಡೆದುರುಳಿಸುವಲ್ಲಿ ನಿಷ್ಣಾತರಾದ ಅವರು ಬಾಕ್ಸಿಂಗ್ ನಿಯಮಾವಳಿ ಉಲ್ಲಂಘಿಸುವ ಮೂಲಕ ನಿಷೇಧದ ಶಿಕ್ಷೆಗೆ ಒಳಗಾಗಿದ್ದಾರೆ.