ಬೆಂಗಳೂರು: ಜುಲೈ ತಿಂಗಳ ಅವಧಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ನಗರಾಧ್ಯಂತ ಪೊಲೀಸರು ಕ್ರಮ ಕೈಗೊಂಡು 226 ದೂರು ದಾಖಲಿಸಿಕೊಂಡು 326 ಆರೋಪಿಗಳನ್ನು ಬಂಧಿಸಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
38 ಏನ್ ಡಿ ಪಿ ಎಸ್ ಪ್ರಕರಣಗಳು, ನಾಲ್ಕು ವಿದೇಶಿ ಪ್ರಜೆಗಳು ಸೇರಿದಂತೆ 54 ವ್ಯಕ್ತಿಗಳನ್ನು ಬಂಧಿಸಿ ಇವರುಗಳಿಂದ 114 ಕೆಜಿ 688 ಗ್ರಾಂ ಗಾಂಜಾ, 176 ಗ್ರಾಮ ಅಫೀಮ್, 745 ಗ್ರಾಂ ಕೋಕೆನ್ ಮತ್ತು ನಾಲ್ಕು ಕೆಜಿ 311 ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.ನ್ಯಾಯಾಲಯಕ್ಕೆ ಎಲ್ ಪಿ ಆರ್ ಪ್ರಕರಣಗಳಲ್ಲಿ ತಲೆಮರಸಿಕೊಂಡಿದ್ದ 43 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಇವರುಗಳು ಕೊಲೆ ಸುಲಿಗೆ ಕೊಲೆ ಯತ್ನ ಹಲ್ಲೆ ಮನೆಗಳು ಹಾಗೂ ಇತರೆ ಪ್ರಕರಣಗಳಲ್ಲಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲವೆಂದು ನ್ಯಾಯಾಲಯ ಇವರ ವಿರುದ್ಧ ಎಲ್ಪಿ ಆರ್ ಹೊರಡಿಸಿತ್ತು.ಒಟ್ಟು 106 ಪಿಎಆರ್ ಪ್ರಕರಣಗಳನ್ನು ದಾಖಲಿಸಿ ತಲೆ ಮರೆಸಿಕೊಂಡಿದ್ದ 9 ರೌಡಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.ಜುಲೈಮಾಹೇಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಪೂರೈಸಿ 15 ಆರೋಪಿಗಳಿಗೆ ಶಿಕ್ಷೆ ಯನ್ನು ನ್ಯಾಯಾಲಯ ಪ್ರಕಟಿಸಿದೆ.