ರಾಜಾಜಿನಗರ: ರಾಜಾಜಿನಗರ ಪ್ರವೇಶ ದ್ವಾರ ಬಳಿ ಡಾ|| ಶಿವಕುಮಾರಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ||ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 6ನೇ ವರ್ಷದ ಸಂಸ್ಮರಣೋತ್ಸವ ಮತ್ತು ದಾಸೋಹ ದಿನ ಅಚರಣೆ.ಡಾ.ಶಿವಕುಮಾರ ಮಹಾಸ್ವಾಮೀಜಿರವರು ಪುತ್ಥಳಿಗೆ ಮೋಟಗಿ ಮಠದ ಪ್ರಭುಚನ್ನಬಸವ ಮಹಾಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷರಾದ ಡಾ||ಶಂಕರ ಬಿದರಿರವರು ಐಪಿಎಸ್.(ನಿ), ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ವೀರಶೈವ ಲಿಂಗಾಯಿತ ಮಹಾಸಭಾ ಬೆಂಗಳೂರುನಗರ ಜಿಲ್ಲಾಧ್ಯಕ್ಷರಾದ ಬಿ.ಆರ್.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಶಿವಕುಮಾರ್,ಖಜಾಂಚಿ ವಿಜಯಕುಮಾರ್ ಕನ್ನಡ ಪರ ಹೋರಾಟಗಾರ ಪಾಲನೇತ್ರ, ಅಧ್ಯಕ್ಷರಾದ ಟಿ.ವೆಂಕಟೇಶ್ ಗೌಡ, ಉಪಾಧ್ಯಕ್ಷ ಕ್ರಾಂತಿರಾಜು, ಸಂಚಾಲಕರಾದ ಬಿ.ದೇವರಾಜುರವರುಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಿವರಾಮೇಗೌಡರವರು ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.
ಪ್ರಭುಚನ್ನಬಸವ ಸ್ವಾಮೀಜಿರವರು ಕಾಯಕವೇ ಕೈಲಾಸ ತತ್ವದ ಪ್ರತಿರೂಪ , ಮಹಾನ್ ಮಾನವೀಯತೆ ಗುಣವುಳ್ಳ ಶಿವಕುಮಾರ ಮಹಾಸ್ವಾಮೀಜಿಗಳು.ಅನ್ನ ,ಶಿಕ್ಷಣ, ಆಶ್ರಯದ ಮಹತ್ವಗಳನ್ನು ಸಾರಿದರು, ಲೋಕಕಲ್ಯಾಣಕ್ಕಾಗಿ ಅವರ ಜೀವನವನ್ನು ಮುಡಿಪಾಗಿಟ್ಟರು.ಶಾಂತಿಯುತೆ, ಸೌರ್ಹದತೆ, ಸಹೋದರತ್ವ ಮತ್ತು ಜೀವನ ಹೇಗೆ ಸಾಗಿಸಬೇಕು ಎಂದು ನಾಡಿನ ಜನರಿಗೆ ಅರಿವು ಮೂಡಿಸಿದ ಮಹಾನ್ ಸಂತ, ನಡೆದಾಡುವ ದೇವರು ಶಿವಕುಮಾರಸ್ವಾಮೀಜಿಗಳ ಆದರ್ಶಗುಣಗಳನ್ನು ಆಳವಡಿಸಿಕೊಂಡು ಎಲ್ಲರು ಜೀವನ ಸಾಗಿಸಿದರೆ ಸಾಕು ಎಂದರು. ಡಾ||ಶಂಕರಬಿದರಿರವರು ಮಾತನಾಡಿ, ಅಚಾರ, ವಿಚಾರ ಸಿದ್ದಾಂತಗಳು ಮೂಲಕ ವಿಶ್ವದ ಗಮನ ಸೆಳದ ಡಾ.ಶಿವಕುಮಾರ ಮಹಾಸ್ವಾಮೀಜಿರವರ ಆದರ್ಶ ತತ್ವಗಳಿಂದ ನಾಡಿನಲ್ಲಿ ಶಾಂತಿ ಲಭಿಸಲಿ. ಡಾ.ಶಿವಕುಮಾರ ಮಹಾಸ್ವಾಮೀಜಿ ಸಾಧನೆ ಮಾಡಿ ಮಹಾನ್ ಸಂತರಾಗಿ ಪರಮಾತ್ಮ ಬಳಿ ಲೀನವಾದರು ಛಲವಾದಿ ನಾರಾಯಣಸ್ವಾಮಿ ರವರು ಮಾತನಾಡಿ ಶಿವಕುಮಾರ ಸ್ವಾಮೀಜಿರವರು ಸಮಾಜಕ್ಕೆ ಕೊಟ್ಟ ಕೊಡುಗೆ ಸದಾ ನಾವು ಸ್ಮರಿಸಬೇಕು, ಎಲ್ಲರಿಗೂ ಮೀರಿದ ಕಾರ್ಯ ಮಾಡಿದರು.
ಸಮಾಜಕ್ಕೆ ಅನ್ನ,ಅಕ್ಷರ, ಆಶ್ರಯವನ್ನು ಕೊಟ್ಯಂತರ ಜನರಿಗೆ ನೀಡಿದರು, ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದವರು ಇಂದು ದೇಶ, ವಿದೇಶದಲ್ಲಿ ಉತ್ತಮ,ಉನ್ನತ ಕೆಲಸದಲ್ಲಿ ಇದ್ದಾರೆ. ಉತ್ತಮ ಸಮಾಜಕ್ಕೆ ಬದುಕು ಕಲ್ಯಾಣವಾಗಲು ಶಿವಕುಮಾರ ಸ್ವಾಮೀಜರವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರು ಸಾಗಬೇಕು ಎಂದರು.