ದೇವನಹಳ್ಳಿ: ತಾಲೂಕಿನ ಕಾರಹಳ್ಳಿ ವಿವಿಧೋದ್ದೇಶಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮುಂದಿನಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಮೀಸಲು ಸ್ಥಾನದಿಂದ ಕೃಷ್ಣಮೂರ್ತಿ- 254, ಆನಂದಪ್ಪ- 231, ರಾಜೇಂದ್ರ .ಸಿ -227 ,ಮುನಿರಾಜು- 200 ಸುಂದರೇಶ್ -195, ಮಹಿಳಾ ಮೀಸಲು ಸ್ಥಾನದಿಂದ ಮೀನಾಕ್ಷಿ -279, ಮೀನಾ.ಎಸ್.ಆರ್- 239, ಹಿಂದುಳಿದ ವರ್ಗಗಳ ಪ್ರವರ್ಗ-ಎ ಮೀಸಲು ಸ್ಥಾನದಿಂದ ದೊಡ್ಡ ಮಲ್ಲಾಚಾರ್- 281, ಹಿಂದುಳಿದ ವರ್ಗಗಳ ಪ್ರವರ್ಗ-ಬಿ ಮೀಸಲು ಸ್ಥಾನದಿಂದ ದೇವರಾಜ.ಎ- 264, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಗಂಗಪ್ಪ -227, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ರಮೇಶ್ .ಎನ್- 271, ಸಾಲಗಾರರಲ್ಲದ ಕ್ಷೇತ್ರದಿಂದ ದೇವರಾಜ .ಆರ್ 92 ಮತಗಳನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಚೇತನ. ಆರ್ ಘೋಷಿಸಿದರು.
ಈ ವೇಳೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ನೂತನ ನಿರ್ದೇಶಕರಾದ ದೇವರಾಜ.ಎ ಮಾತನಾಡಿ ಸಂಘದ ಎಲ್ಲಾ ಸದಸ್ಯರ ಸರ್ವಾನುಮತದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಮಾದರಿಯಾಗುವಂತೆ ಸಹಕಾರ ಸಂಘದ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಗತಗೊಳ್ಳುತ್ತೇವೆ ಹಾಗೂ ನೂತನವಾಗಿ ಬಹುಮತಗಳನ್ನು ಪಡೆಯುವುದರ ಮೂಲಕ ನಿರ್ದೇಶಕರಾಗಿರುವ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿ ಶುಭ ಹಾರೈಸಿ ಸಂಘದ ಎಲ್ಲ ಸದಸ್ಯರಿಗೂ ಅಭಿನಂದನೆಗಳನ್ನು ತಿಳಿಸಿದರು.
ಚುನಾವಣೆಯಲ್ಲಿ ಬಹುಮತ ಪಡೆಯುವುದರ ಮೂಲಕ ಆಯ್ಕೆಯಾಗಿರುವ ನೂತನ ನಿರ್ದೇಶಕರಿಗೆ ತಾಲೂಕಿನ ಹಲವು ಮುಖಂಡರು ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಮುನೇಗೌಡ, ಸಂಘದ ಮಾಜಿ ಅಧ್ಯಕ್ಷ ಆರ್.ಮಂಜುನಾಥ್, ಮುಖಂಡರಾದ ಕೆ.ಎನ್ ಮುನಿರಾಜು(ಕುಪ್ಪಳ್ಳಿ ರಾಜಣ್ಣ), ಕಾರಹಳ್ಳಿ ಶ್ರೀನಿವಾಸ್, ಪಂಚಾಯತಿ ಹಾಲಿ ಸದಸ್ಯರಾದ ಎಸ್.ಕೆ ಜಯರಾಮಯ್ಯ ಸೊಣ್ಣೇನಹಳ್ಳಿ ಮತ್ತು ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ಮುನಿರಾಜು, ಎನ್ ರಮೇಶ್ ಎನ್ ಶಶಿಕುಮಾರ್ ಸೇರಿದಂತೆ ಹಲವು ಮುಖಂಡರು ಮತ್ತು ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.



