ಲಕ್ನೋ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ರಾಜ್ಯದಿಂದ ತೆರಳಿದ್ದ ಇಬ್ಬರು ಯುವಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಮೈಸೂರು ಮೂಲದ ಯುವಕರು ಕಾರಿನಲ್ಲಿ ಪ್ರಯಾಗ್ರಾಜ್ಗೆ ತೆರಳಿದ್ದರು. ಉತ್ತರಪ್ರದೇಶದ ಮಿರ್ಜಾಪುರ ಬಳಿ ಕಾರು ಲಾರಿಗೆ ಡಿಕ್ಕಿ ಹೊಡೆದಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಮೃತರು ಕಾರಿನಲ್ಲಿ ಕಾಶಿಗೆ ತೆರಳುವ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಮೈಸೂರಿನ ಮಂಟಿಕ್ಯಾತನಹಳ್ಳಿ ಮೂಲದ ಅರುಣ್ಶಾಸ್ತ್ರಿ ಹಾಗೂ ಮಂಡ್ಯ ತಾಲೂಕಿನ ಕೆ.ಆರ್. ಎಸ್ನ ರಾಮಕೃಷ್ಣ ಶರ್ಮ ಎಂದು ಗುರುತಿಸಲಾಗಿದೆ.