ದೇವನಹಳ್ಳಿ: ಪತ್ರಿಕೋದ್ಯಮ ಎಂಬುದು ಕೇವಲ ಪ್ರಚಾರಕ್ಕೆ ಇರುವ ಸರ್ಕಲ್ ಎಂಬುದನ್ನುವೃತ್ತಿ ನಿರತ ಪತ್ರಕರ್ತರು ತಿಳಿದುಕೊಳ್ಳಬೇಕಿದೆ ಎಂದು ತಾಲೂಕು ಪತ್ರಕರ್ತ ಅಧ್ಯಕ್ಷ ಸುನಿಲ್ ತಿಳಿಸಿದರು.ಪಟ್ಟಣದ ಬಿಬಿ ರಸ್ತೆಯಲ್ಲಿರುವ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ವಿಶೇಷ ಆಯುಧ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಎಲ್ಲಾ ವರ್ಗಗಳ ಏಳಿಗೆಗೆ ವರದಿಗಳನ್ನು ಮಾಡಲು ದೀನ ದಲಿತರ ನಿರ್ಗತಿಕರ ಜೀವನ ಸುಧಾರಣೆಗಾಗಿ ಕ್ಷಮಿಸುವ ಬದ್ಧತೆಯನ್ನು ಪತ್ರಕರ್ತರಿಗೆ ದೇವರು ಕರುಣಿಸಲಿ ಎಂದು ತಿಳಿಸಿದರು.
ಜಿಲ್ಲಾ ನಾಮ ನಿರ್ದೇಶಕ ಸದಸ್ಯ ಶ್ರೀನಿವಾಸ್ ಗಾಂಧಿ ಮಾತನಾಡಿ ಸಮಾಜದಲ್ಲಿ ಪತ್ರಕರ್ತರೆಂದರೆ ಗೌರವದಿಂದ ಕಾಣುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಜಾತಿ ಮತ ಎಂದು ಜಾತಿ ಜಾತಿ ಎಂದು ಹೊಡೆದಾಡುವ ಶಕ್ತಿಗಳನ್ನು ದೂರ ಮಾಡಿ. ಒಗ್ಗಟ್ಟಿನಿಂದ ಬಾಳುವ ಸಹಬಾಳ್ವೆ ನೀಡಲಿ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಟಿ ಎಂ ನಾಗರಾಜ್, ಸುರೇಶ್, ಎಸ್ ಮಹೇಶ್, ತಾಲೂಕು ಉಪಾಧ್ಯಕ್ಷರಾದ ನರಸಿಂಹಮೂರ್ತಿ, ಖಜಾಂಚಿ ಐದರ್ ಸಾಬ್, ಕಾರ್ಯದರ್ಶಿ ಜಗದೀಶ್, ನಾಮ ಸದಸ್ಯ ಎನ್ ನಾರಾಯಣಸ್ವಾಮಿ, ಹಿರಿಯರಾದ ಪಿಳ್ಳ ರಾಜು, ಪರ್ವತರಾಜು, ಇನ್ನು ಅನೇಕ ಪತ್ರಕರ್ತರು ಇದ್ದರು.