ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಬಿಜೆಪಿ ಆರ್. ಅಶೋಕ್ ಆರೋಪಿಸಿದ್ದಾರೆ.ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ ಅವರು, ಗೃಹ ಇಲಾಖೆಗೂ ಸಚಿವರಿಗೂ ಸಂಬಂಧವಿಲ್ಲದಂತೆ ಕಾಣುತ್ತಿದೆ. ಮತ್ಯಾರೋ ಸಚಿವರು ಇಲಾಖೆ ನಿರ್ವಹಣೆ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.
ಬಿಡದಿಯಲ್ಲಿ ತಲೆತಗ್ಗಿಸುವಂತಹ ಕೆಲಸ ನಡೆದಿದೆ. ಪ್ರತಿಷ್ಠಿತ ಟಯೋಟೋ ಕಿರ್ಲೋಸ್ಕರ್ ಕಾರ್ಖಾನೆ ಗೋಡೆ ಮೇಲೆ ಪಾಕ್ ಪರ ಘೋಷಣೆ ಬರೆಯಲಾಗಿದೆ. ಕನ್ನಡವನ್ನು ಅವಹೇಳನ ಮಾಡಲಾಗಿದೆ. ಇದು ತಲೆತಗ್ಗಿಸುವಂತಹ ಕೆಲಸ ಎಂದು ದೂರಿದ ಅಶೋಕ್ ಕಿಡಿಗೇಡಿಗಳಿಗೆ ಗುಂಡುಹಾಕಿ ಎಂದು ಆಗ್ರಹ ಪಡಿಸಿದ್ದಾರೆ.ಕಿಡಿಗೇಡಿಗಳಿಗೆ ಗುಂಡು ಹಾಕಿದರೆ ಬುದ್ದಿ ಬರುತ್ತದೆ. ಸಮಾಜ ಸರಿಹೋಗುತ್ತದೆ ಎಂದು ಹೇಳಿರುವ ಅವರು, ಸರ್ಕಾರ ಎಫ್ಐಆರ್ ಆಗಿದ್ದರೂ ಈ ಬಗ್ಗೆ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರ ಯಾರನ್ನು ರಕ್ಷಿಸಲು ಮುಂದಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ವಿದೇಶಿಗರು ನಮ್ಮನ್ನು ಹೊಗಳಿದ್ದಾರೆ ಎಂದುಸಿಎಂ ಹೇಳುತ್ತಾರೆ. ಆದರೆ ರಾಜ್ಯದಲ್ಲಿ ವಿದೇಶಿಗರ ಮೇಲೆ ಅತ್ಯಾಚಾರ ನಡೆದಿದೆ.ಹೋಂಸ್ಟೇನಲ್ಲೂ ಅತ್ಯಾಚಾರ ನಡೆದಿದೆ. ಹಾವೇರಿ ಜಿಲ್ಲೆಯ ಮಾಸೂರಿನಲ್ಲಿ ಸ್ವಾತಿ ಕೊಲೆ ಪ್ರಕರಣ ನಡೆದಿದೆ ಎಂದು ರಾಜ್ಯದಲ್ಲಿ ನಡೆದಿರುವ ಅಹಿತಕರ ಘಟನೆಗಳ ಬಗ್ಗೆ ಪ್ರಸ್ತಾಪ ಮಾಡಿದ ಅಶೋಕ್ ಇದೊಂದು ಗುಂಡಾ ರಾಜ್ಯ ಎಂದು ಗುಡಿಗಿದರು.ತಮ್ಮ ಮಾತಿನುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.