ದೇವನಹಳ್ಳಿ : ಸರ್ಕಾರಿ ಪ್ರೌಢಶಾಲೆ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಸಹಾಯಧನದ ಚೆಕ್ ನಮ್ಮ ಕುಂದಾಣ ಗ್ರಾಮ ಪಂಚಾಯ್ತಿ ವತಿಯಿಂದ ನೀಡಲಾಗುತ್ತಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದರು.ಅವರು ಕುಂದಾಣ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಸಹಾಯ
ಧನದ ಚೆಕ್ ವಿತರಿಸಿ ಮಾತನಾಡಿ ಎಸ್.ಸಿ., ಎಸ್.ಟಿ ಮಕ್ಕಳ ಶೈಕ್ಷಣಿಕ ಪ್ರವಾಸ ಮುಗಿಸಿ ಬಂದಿದ್ದು, ಸಹಾಯಧನದ ರೂಪದಲ್ಲಿ ಪಂಚಾಯ್ತಿಯಿಂದ 25 ಸಾವಿರ ರೂಗಳ ಚೆಕ್ ನೀಡಲಾಗುತ್ತಿದೆ ಸುಮಾರು 33 ಮಕ್ಕಳು ಪ್ರವಾಸಕ್ಕೆ ತೆರಳಿದ್ದರು ಎಂದರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನೇತ್ರಾವತಿ ನಾಗೇಶ್ ಮಾತನಾಡಿ ಈ ಪ್ರೌಡಶಾಲೆಯಲ್ಲಿ ಬಹುತೇಕ ಮಕ್ಕಳು ಪರಿಶಿಷ್ಠ ಜಾತಿಗೆ ಸೇರಿದವ
ರಾಗಿದ್ದಾರೆ, ಅವರ ಶೈಕ್ಷಣಿಕ ಪ್ರವಾಸಕ್ಕೆಸಹಾಯಧನವಾಗಿ ಚೆಕ್ ವಿತರಿಸಲಾಗುತ್ತಿದೆ, ಈ ಪ್ರವಾಸ ಮಕ್ಕಳಿಗೆ ಹೊಸ ಅನುಭವ ನೀಡಲಿದ್ದು ಶಿಕ್ಷಣಕ್ಕೆ
ಸಹಕಾರಿಯಾಗಲಿದೆ, ಮಕ್ಕಳು ಸಹಶ್ರಮಪಟ್ಟು ಓದಿ ಉನ್ನತ ವ್ಯಾಸಂಗ ಮಾಡಿ ನಮ್ಮ ಶಾಲೆಗೆ ಹಾಗೂ ಗ್ರಾಮಕ್ಕೆ ಹೆಸರು ತನ್ನಿ, ಪೋಷಕರು ಸಹ ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ, ಸರ್ಕಾರದಿಂದ ಅನೇಕ ಸವಲತ್ತುಗಳು ದೊರೆಯ
ಲಿವೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಮಯದಲ್ಲಿ ಗ್ರಾ.ಪಂ. ಸದಸ್ಯ ಹಾಗೂ ಕುಂದಾಣ ಸರಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ವಿ.ಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನೇತ್ರಾವತಿ ನಾಗೇಶ್ ಗ್ರಾ.ಪಂ. ಉಪಾಧ್ಯಕ್ಷೆ ನೀಲಮ್ಮ, ಮಾಜಿ ಅಧ್ಯಕ್ಷೆ ವಿಜಯ ಬಿ.ವಿ. ಸ್ವಾಮಿ, ಗ್ರಾಪಂ.ಸದಸ್ಯ ಕ್ಯಾತೇಗೌಡ, ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ದ್ಯಾವರಹಳ್ಳಿ ವಿ.ನಾರಾಯಣಸ್ವಾಮಿ, ಕ್ಯಾತೇಗೌಡ, ವಿಜಯ ಬಿ.ವಿ.ಸ್ವಾಮಿ, ಶೋಭಾ, ವರಲಕ್ಷ್ಮಮ್ಮ, ಸುಬ್ರಮಣಿ, ಮುನಿಯಪ್ಪ, ರಾಮಚಂದ್ರ, ಡಿ.ಆರ್.ಮಾಲ, ಪ್ರವೀಣ್ಕುಮಾರ್, ಗ್ರಾ.ಪಂ ಕಾರ್ಯದರ್ಶಿ ಉಷಾ, ಬಿಲ್ ಕಲೆಕ್ಟರ್ಗಳಾದ ಶಾಂತಕುಮಾರ, ಸುರೇಶ್, ರೂಪಶ್ರೀ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.