ದೇವನಹಳ್ಳಿ : ಮಹರ್ಷಿ ವಾಲ್ಮೀಕಿ ರಾಮಾಯಣ ಗ್ರಂಥದ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ ಮಹಾನ್ ದಾರ್ಶನಿಕರು ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್ ತಿಳಿಸಿದರು.
ಅವರು ತಾಲೂಕಿನ ಕುಂದಾಣ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ಆಯುದಾ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿಯಾವುದೇ ಒಂದು ಸಮುದಾಯ ಅಭಿವೃದ್ಧಿಯಾಗಬೇಕಾದರೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವ ರಿಯಬೇಕು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಾಲ್ಮೀಕಿ ನಾಯಕರಿಗೆ ವಿಶೇಷ ಪ್ರಾತಿನಿದ್ಯ ನೀಡಿದ್ದಾರೆ,
ರಾಷ್ಟ್ರಪಿತ ಮಹಾತ್ಮ ಗಾಂಧಿ ಬಯಸಿದ್ದ ‘ರಾಮರಾಜ್ಯ’ ಪರಿಕಲ್ಪನೆ ಲಭ್ಯವಾಗಿದ್ದು ಮಹರ್ಷಿ ವಾಲ್ಮೀಕಿ ರಜಿಸಿದ ‘ರಾಮಾಯಣ’ದಿಂದ ಎಂಬುದು ನಿರ್ವಿವಾದ. ಜಾತಿರಹಿತ, ವರ್ಗರಹಿತ, ಶೋಷಣೆರಹಿತ,ಸಮಪಾಲು-ಸಮಬಾಳು, ಸಮಾನಅವಕಾಶದ ಸಮಾಜವೇ ರಾಮರಾಜ್ಯ- ಎಂಬುದನ್ನು ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಮನುಕುಲಕ್ಕೆ ತೋರಿದ್ದಾರೆ, ರಾಜರು ಮತ್ತು ಜನ ಪ್ರತಿನಿಧಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದೇ ಧರ್ಮದ ತಳಹದಿ ಎಂಬುದನ್ನು ಶ್ರೀರಾಮ ಮತ್ತು ಸಹೋದರ ಭರತನ ಸಂವಾದದ ಮೂಲಕ ಮನುಕುಲಕ್ಕೆ ಮಹರ್ಷಿ ವಾಲ್ಮೀಕಿ ತಿಳಿಸಿದ್ದಾರೆ ಎಂದರು.
ಇದೇ ಸಮಯದಲ್ಲಿ ಆಯುಧಾ ಪೂಜೆಯನ್ನು ನೆರವೇರಿಸಿ ಪಂಚಾಯ್ತಿಯ ಎಲ್ಲಾ ಸದಸ್ಯರಿಗೆ ಸಿಹಿ ಹಂಚಿ ಉಡುಗೊರೆಗಳನ್ನು ಸಹ ನೀಡಲಾಯಿತು.
ಈ ಸಮಯದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಪ್ರಸನ್ನ ಕುಮಾರ್, ಜಿ.ಪಂ. ಮಾಜಿ ಸದಸ್ಯ ಕೆ.ಸಿ. ಮಂಜುನಾಥ್, ಬಚ್ಚೇಗೌಡ, ವಿಶ್ವನಾಥಪುರ ಗ್ರಾ.ಪಂ. ಪಿಡಿಓ ಬೀರೇಶ್, ಕುಂದಾಣ ಪಿಡಿಓ ಕುಮಾರ್, ಕುಂದಾಣ ಗ್ರಾ.ಪಂ ಅಧ್ಯಕ್ಷೆ ನೇತ್ರಾ ನಾಗೇಶ್, ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ, ಸದಸ್ಯರಾದ ವಿ.ನಾರಾಯಣಸ್ವಾಮಿ, ಕ್ಯಾತೇಗೌಡ, ವಿಜಯ ಬಿ.ವಿ.ಸ್ವಾಮಿ, ಶೋಭಾ, ವರಲಕ್ಷ್ಮಮ್ಮ, ಸುಬ್ರಮಣಿ, ಮುನಿಯಪ್ಪ, ಕೆ.ವಿ.ಸ್ವಾಮಿ, ರಾಮಚಂದ್ರ, ಡಿ.ಆರ್.ಮಾಲ, ಪ್ರವೀಣ್ಕುಮಾರ್, ಗ್ರಾ.ಪಂ ಕಾರ್ಯದರ್ಶಿ ಉಷಾ, ಬಿಲ್ ಕಲೆಕ್ಟರ್ಗಳಾದ ಶಾಂತಕುಮಾರ, ಸುರೇಶ್, ರೂಪಶ್ರೀ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಇದ್ದರು.