ದೇವನಹಳ್ಳಿ: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕರ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾದ ಕುಂದಾಣ ನಾಡ ಕಛೇರಿಯ ರಾಜಸ್ವ ನಿರೀಕ್ಷಕ ಹನುಮಂತರಾಯಪ್ಪನವರಿಗೆ ಉಪತಹಸೀಲ್ದಾರ್ ಚೈತ್ರ ಸಮ್ಮುಖದಲ್ಲಿ ಕಛೇರಿಯ ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಮಯದಲ್ಲಿ ಉಪತಹಸೀಲ್ದಾರ್ ಚೈತ್ರ ಮಾತನಾಡಿರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಮ್ಮ ಆರ್.ಐ ಕಂದಾಯ ಇಲಾಖೆಯಿಂದ ಜಿಲ್ಲಾ ಮಟ್ಟದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ವಿಜೇತರಾಗಿದ್ದಾರೆ, ಅವರು ಇನ್ನೂ ಉನ್ನತ ಮಟ್ಟಕ್ಕೆ ಹೋಗಿ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲೆಂದು ನಮ್ಮ ಎಲ್ಲಾ ಸಿಬ್ಬಂದಿ ಪರವಾಗಿ ಶೂಭ ಕೋರುತ್ತೇನೆ ಎಂದರು. ಈ ಸಮಯದಲ್ಲಿ ಸಂತೋಷ್, ಗ್ರಾಮ ಆಡಳಿತಾಧಿಕಾರಿ ಸುಬ್ರಮಣಿ, ರಾಮಚಂದ್ರ, ರಮ್ಯ, ಸಂತೋಷ್ ಹಂಚಿನ ಮನೆ, ಲಾವಣ್ಯ, ಎಸ್.ಡಿ.ಎ. ರಾಮಕೃಷ್ಣ ಹಾಜರಿದ್ದರು.