ದೊಡ್ಡಬಳ್ಳಾಪುರ: ಎರಡು ವರ್ಷಗಳಿಂದ ತಾಲ್ಲೂಕು ಮಟ್ಟದಿಂದ ಜಿಲ್ಲಾಧಿಕಾರಿಗಳವರೆಗೆ ಮನವಿ ನೀಡಿದರು, ಹತ್ತಾರು ಬಾರಿ ಕಚೇರಿಗೆ ಅಲೆದಾಡಿದರು ಸಹ ಮಾಲಿನ್ಯ ನಿಯಂತ್ರಣ ಮಂಡಲಿ ಕಚೇರಿ ಬೆಂಗಳೂರಿನಿಂದ ತಾಲ್ಲೂಕಿಗೆ ಸ್ಥಳಾಂತರ ಆಗದೇ ಇರುವುದು, ಶಾಲಾ ಆವರಣದ ಸಮೀಪವೇ ತಂಬಾಕು ಮಾರಾಟ ನಡೆಯುತ್ತಿದ್ದರು ನಿಯಂತ್ರಿಸದೇ ಇರುವುದು,
ನಗರಸಭೆ ವತಿಯಿಂದ ಘನತ್ಯಾಜ್ಯ, ದ್ರವತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡದೇ ಇರುವುದು, ನ್ಯಾಯಬೆಲೆ ಅಂಗಡಿಗಳನ್ನು ತಿಂಗಳು ಪೂರ ತೆರೆಯದೆ ಇರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಲ್ಲಾ ಆಡಳಿತ ಕುಂಭಕರ್ಣ ನಿದ್ರೆಯಲ್ಲಿ ಇದೆ.
ನಮ್ಮ ಮನವಿಗಳಿಗೆ ಹೊಸ ವರ್ಷದಲ್ಲಾದರು ಜಿಲ್ಲಾ ಆಡಳಿತ ನಿದ್ರೆಯಿಂದ ಎಚ್ಚರಗೊಂಡು ಪರಿಹಾರ ಸೂಚುಸುವಂತೆ ಎಚ್ಚರಿಸಲು ಹಾಗೂ ಶುಭಾಶಯ ಕೋರಿ ಯುವ ಸಂಚಲನ ತಂಡದ ಸದಸ್ಯರು ಕುಂಭಕರ್ಣ ವೇಷದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾಧಿಕಾರಿ ಎನ್. ಶಿವಶಂಕರ್ ಅವರಿಗೆ ಮನವಿ ಸಲ್ಲಿಸಿದರು.