ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ಚಾಲಕನಿಂದ ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದ ಘಟನೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಯ ಬಗ್ಗೆ ಮಹಿಳೆಯ ಪತಿ ಮಾಹಿತಿ ನೀಡಿದ್ದು, ಮಹಿಳೆ ಹೊರಮಾವು-ಥಣಿಸಂದ್ರಕ್ಕೆ ಆಟೋರಿಕ್ಷಾವನ್ನು ನಮ್ಮ ಯಾತ್ರಿ’ ಮೂಲಕ ಬುಕ್ ಮಾಡಿದ್ದಾರೆ.
“ನನ್ನ ಪತ್ನಿ ಹೊರಮಾವು ನಿಂದ ಬೆಂಗಳೂರಿನ ಥಣಿಸಂದ್ರಕ್ಕೆ ಆಟೋವನ್ನು ಬುಕ್ ಮಾಡಿದ್ದಳು, ಆದರೆ ಡ್ರೈವರ್ ಕುಡಿದು ಹೆಬ್ಬಾಳದ ಬಳಿ ತಪ್ಪಾದ ಸ್ಥಳಕ್ಕೆ ಕರೆದೊಯ್ದನು. ಪದೇ ಪದೇ ನಿಲ್ಲಿಸುವಂತೆ ಕೇಳಿಕೊಂಡರೂ ಕೇಳಲಿಲ್ಲ, ಇದು ಆಕೆಯನ್ನು ಚಲಿಸುತ್ತಿದ್ದ ಆಟೋದಿಂದ ಜಿಗಿಯುವಂತೆ ಮಾಡಿದೆ’ ಎಂದು ವ್ಯಕ್ತಿ ಶುಕ್ರವಾರ X’ ನಲ್ಲಿ ಪೋಸ್ಟ್ ಮಾಡಿದ್ದಾರೆ.