ಪುಣೆ: ಇಂದು ಮುಂಜಾನೆ ಟ್ರಕ್ ರಸ್ತೆಯಿಂದ ಫುಟ್ಪಾತ್ ಮೇಲೆ ಪಲ್ಟಿಯಾಗಿ ಬಿದ್ದು, ಅದರ ಮೇಲೆ ಮಲಗಿದ್ದ 9 ಜನರು ಟ್ರಕ್ನಡಿ ಸಿಲುಕಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕನನ್ನು ಗಜಾನನ ಶಂಕರ್ ತೋಟೆ (26) ಎಂದು ಗುರುತಿಸಲಾಗಿದೆ. ಆತ ಕುಡಿದು ವಾಹನ ಚಲಾಯಿಸುತ್ತಿದ್ದ. ಆತನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ವಘೋಲಿಯ ಕೇಸ್ನಂದ್ ಫಾಟಾ ಬಳಿ ಇಂದು ಮುಂಜಾನೆ 1 ಗಂಟೆಗೆ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಸಾಗುತ್ತಿದ್ದ ಡಂಪರ್ ಟ್ರಕ್ ಏಕಾಏಕಿ ರಸ್ತೆಯಿಂದ 12 ಮಂದಿ ಮಲಗಿದ್ದ ಫುಟ್ಪಾತ್ಗೆ ಪಲ್ಟಿಯಾಗಿದೆ. 9 ಮಂದಿ ಟ್ರಕ್ ಅಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಇತರರು ಗಾಯಗಳೊಂದಿಗೆ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.