ಕುಣಿಗಲ್: ಕುಣಿಗಲ್ನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾ ಜ್ಯೋತಿಯನ್ನು ತಾಲೂಕು ಆಡಳಿತ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ, ವಿವಿಧ ಕನ್ನಡ ಪರ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಅದ್ದೂರಿಯಾಗಿ ಬರಮಾಡಿಕೊಂಡು, ಬಳಿಕ ಪಟ್ಟಣದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ತುಮಕೂರಿನಲ್ಲಿ ನ 24 ರಂದು ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾ ಕೂಡದ ಅಂಗವಾಗಿ ಜಿಲ್ಲೆಯಲ್ಲಿ ಸಂಚರಿಸುವ ಕ್ರೀಡಾ ಕೂಟದ ಜ್ಯೋತಿ ಕುಣಿಗಲ್ ಪಟ್ಟಣಕ್ಕೆ ಗುರುವಾರ ಆಗಮಿಸಿತು, ಕ್ರೀಡಾ ಜ್ಯೋತಿ ಮತ್ತು ಅದರೊಂದಿಗೆ ಆಗಮಿಸಿದ ಕೆ.ಯು.ಡಬ್ಲ್ಯೂ.ಜೆ ರಾಜ್ಯಾಧ್ಯಕ್ಷ ಶಿವನಂದತಗಡೂರು, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ರಾಷ್ಟ್ರೀಯ ಮಂಡಲಿ ಸದಸ್ಯ ಟಿ.ಎನ್.ಮಧುಕರ್ ಅವರನ್ನು ಪಟ್ಟಣದ ಗ್ರಾಮ ದೇವತೆ ಸರ್ಕಲ್ಗೆ ಬರುತ್ತಿದಂತೆ ತಹಶೀಲ್ದಾರ್ ರಶ್ಮಿ.ಯು, ತಾ.ಪಂ ಇಓ ಎಸ್.ನಾರಾಯಣ್, ಸಿಪಿಐ ನವೀನ್ಗೌಡ, ಪುರಸಭಾ ಮುಖ್ಯಾಧಿಕಾರಿ ಜಿ.ಮಂಜುಳ, ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಆರ್.ರಂಗನಾಥ್ ಮತ್ತು ಆನೇಕ ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಬರ ಮಾಡಿಕೊಂಡು ಬಳಿಕ ಕ್ರೀಡಾ ಜ್ಯೋತಿಗೆ ಎಣ್ಣೆ ಭತ್ತಿ ಹಾಗೂ ಹೂವಿನ ಹಾರ ಹಾಕಿ ಭವ್ಯವಾಗಿ ಬರಮಾಡಿಕೊಂಡರು,
ಅದ್ದೂರಿ ಮೆರವಣಿಗೆ : ನೂರಾರು ಮಹಿಳೆಯರು ಹೊತ್ತಿದ್ದ ಪೂರ್ಣಕುಂಭ ಮೇಳ ನೋಡುಗರಿಗೆ ಅಕರ್ಷಣೆಯಾಗಿತ್ತು, ಸ್ಟೇಲ್ಲಾ ಮೇರಿಸ್, ಜ್ಞಾನಭಾರತಿ, ಬಿಜಿಎಸ್ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಬ್ಯಾಡ್ ಸೆಂಟ್, ಡೋಲು, ಚರ್ಮವಾದ್ಯ ಕಣ್ಮನಸೆಳೆಯುವಂತ್ತಿತು, ರಂಗನಾಥ್ ಕ್ರಿಕೆಟ್ ಕ್ಲಬ್ನ ಮಕ್ಕಳ ಸ್ಕೇಟಿಂಗ್ ಅಕರ್ಷಣೆಯಾಗಿತ್ತು, ವಿದ್ಯಾರ್ಥಿಗಳ ಕೈಯಲ್ಲಿ ಕನ್ನಡದ ಬಾವುಟ ರಾರಾಜಿಸುತ್ತಿದ್ದವು ಗ್ರಾಮೀಣ ಭಾಗದ ಚರ್ಮವಾದ್ಯ ಮೆರವಣಿಗೆಗೆ ಮುದ ನೀಡಿತ್ತು, ಬಾಳೆ ಕಂದು ಹಾಗೂ ಹಸಿರು ತೋರಣದಿಂದ ಪಟ್ಟಣವನ್ನು ಸಿಂಗರಿಸಲಾಗಿತ್ತು, ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು, ಮೆರವಣಿಗೆ ಎರಡು ಕಿ.ಮೀ ದೂರದವರಗೆ ಇತ್ತು, ಗ್ರಾಮ ದೇವತೆ ವೃತ್ತದಿಂದ ಅದ್ದೂರಿ ಮೆರವಣಿಗೆಯೊಂದಿಗೆ ತಾಲೂಕು ಆಡಳಿತ ಸೌಧ ಅವರಣದಲ್ಲಿ ಆಯೋಜಿಸಿದ ವೇದಿಕೆಗೆ ಕರೆತರಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಪತ್ರಕರ್ತರು ತಮ್ಮ ವೃತ್ತಿ ಬಧುಕಿನಲ್ಲಿ ಸದಾ ಒತ್ತಡದಲ್ಲಿ ಇರುತ್ತಾರೆ, ಒತ್ತಡದಿಂದ ಹೊರ ಬರಲು ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು ಅಗತ್ಯವಾಗಿರುತ್ತದೆ, ಸಮಾಜದ ಅಂಕು, ಡೋಂಕುಗಳನ್ನು ತಿದ್ದಿ ಬಡವರ ಮತ್ತು ಸಮಾಜದ ಕೆಲಸವನ್ನು ಮಾಡಲು ಸರ್ಕಾರಕ್ಕೆ ಪತ್ರಿಕೆ ವರದಿಗಳ ಮೂಲಕ ಗಮನ ಸೆಳೆಯುತ್ತಿರುವ ಪತ್ರಕರ್ತರು ಪಡುತ್ತಿರುವ ಸಮಸ್ಯೆಗೆ ಸರ್ಕಾರ ಸ್ಪಂಧಿಸಿ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕೆಂದರು. ಪತ್ರಕರ್ತರ ದೈಹಿಕ ಮತ್ತು ಆರೋಗ್ಯ ಬೆಳವಣಿಗೆಗೆ ರಾಜ್ಯಮಟ್ಟದ ಕ್ರೀಡಾ ಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕೆ.ಯು.ಡಬ್ಲ್ಯೂ.ಜೆ ರಾಜ್ಯಾಧ್ಯಕ್ಷ ಶಿವನಂದತಗಡೂರು ಮಾತನಾಡಿ ಸಮಾಜದಲ್ಲಿನ ಅಸಮಾನತೆ ನಿರ್ವಹಣೆಗಾಗಿ ನಾಗರೀಕರಿಗೆ ಮೂಲಭೂತ ಸೌಲಭ್ಯ, ಸಮಾನತೆಯ ಹಕ್ಕುಗಳಿಗಾಗಿ ಪತ್ರಕರ್ತರು ನಿತ್ಯ ತಮ್ಮ ಬರವಣಿಗೆ ಮೂಲಕ ಸರ್ಕಾರವನ್ನು ಎಚ್ಚರಿಸುವಂತ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ, ಪತ್ರಕರ್ತರ ಒತ್ತಡವನ್ನು ಹೊಂದಿಷ್ಟು ಕಡಿಮೆ ಮಾಡಲು ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಣ್ಣುತುಂಬಿಕೊಂಡ ಕಾರ್ಯಕ್ರಮ : ಕುಣಿಗಲ್ನಲ್ಲಿ ನಡೆದ ಕ್ರೀಡಾ ಜ್ಯೋತಿ ಕಾರ್ಯಕ್ರಮವು ಅದ್ಬುತವಾಗಿತ್ತು ಈ ಕಾರ್ಯಕ್ರಮವನ್ನು ಕಣ್ಣುತುಂಬಿಕೊಂಡಿದ್ದೇನೆ ಎಂದು ತಗಡೂರು ಮೆಚ್ಚಿಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆ.ಯು.ಡಬ್ಲ್ಯೂ.ಜೆ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ರಾಜ್ಯ ಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ, ರಾಷ್ಟ್ರೀಯ ಮಂಡಲಿ ಸದಸ್ಯರಾದ ಶಾಂತರಾಜು, ಡಿ.ಎಂ ಸತೀಶ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಹಾರೋಗೆರೆ, ನಿರ್ದೇಶಕರಾದ ಪರಮೇಶ್, ಯಶಸ್ಸ್, ಕೆ.ಎ.ರವೀಂದ್ರಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ರಂಗರಾಜು, ಪುರಸಭಾ ಸದಸ್ಯ ರಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಸಿ.ಶಿವಣ್ಣ, ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯರಮೇಶ್, ಕರವೇ ಅಧ್ಯಕ್ಷ ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ದಿನೇಶ್ಕುಮಾರ್, ಪರಮೇಶ್ವರ್ ಯು ಸೈನ್ಯ ರಾಜ್ಯಾಧ್ಯಕ್ಷ ನಗುತಾ ರಂಗನಾಥ್, ಟಿಹೆಚ್ಓ ಮರಿಯಪ್ಪ, ಸಿಡಿಪಿಓ ಮಧುಮತಿ, ಬಿಸಿಎಂ ವಿಸ್ತರಣಾಧಿಕಾರಿ ವೇದಮೂರ್ತಿ, ಪುರಸಭಾ ಸದಸ್ಯ ರಂಗಸ್ವಾಮಿ, ತಾಲೂಕು ಘಟಕದ ಉಪಾಧ್ಯಕ್ಷ ಬೀಚನಹಳ್ಳಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ದಲಿತ್ ನಾರಾಯಣ್, ಕಾರ್ಯದರ್ಶಿ ಶಂಕರ್ನಾಗ್, ನಿರ್ದೇಶಕರಾದ ಟಿ.ಹೆಚ್.ಗುರುಚರಣ್ಸಿಂಗ್, ರಾಮಚಂದ್ರಯ್ಯ, ಟಿ.ಹೆಚ್.ಆನಂದ್ಸಿಂಗ್, ಕೆ.ಎನ್.ಲೋಕೇಶ್, ಶಂಕರ್, ಎಚ್.ಎಂ ಅಶೋಕ್, ರೇಣುಕಾಪ್ರಸಾದ್, ಗೋಪಾಲ್ ಮತ್ತು ವಸಂತ್ಕುಮಾರ್, ಶಿವಕುಮಾರ್, ಕೆ.ಎಸ್.ಕೃಷ್ಣ ಮತ್ತಿತರರು ಇದ್ದರು