ಬೆಂಗಳೂರು: ಇಂದು ರೇಣುಕಾಸ್ವಾಮಿ ಹತ್ಯೆ ಆರೋಪಿ ನಟ ದರ್ಶನ್ ಹಾಗೂ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಮಾಜಿ ಸಚಿವ ನಾಗೇಂದ್ರ ಅವರ ಜಾಮೀನು ಸಂಬಂಧಪಟ್ಟಂತೆ ತೀರ್ಪು ಹೊರಬೀಳಲಿದ್ದು, ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್ನಲ್ಲಿ ಬಂಧಿತರಾಗಿರುವ ಮಾಜಿ ಸಚಿವ ನಾಗೇಂದ್ರ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ. ಬಹುತೇಕ ಮಧ್ಯಾಹ್ನದ ವೇಳೆಗೆ ಜಾಮೀನು ತೀರ್ಪು ಬರುವ ಸಾಧ್ಯತೆಯಿದೆ. ಹಾಗಾಗಿ ಇವತ್ತು ಸಿಟಿ ಸಿವಿಲ್ ನ್ಯಾಯಾಲಯದತ್ತ ಚಿತ್ತ ನೆಟ್ಟಿದೆ.
ಈಗಾಗಲೇ ನಾಗೇಂದ್ರ ವಿರುದ್ಧ ಇಡಿ ಅಧಿಕಾರಿಗಳು ಪ್ರಾಸಿಕ್ಯೂಷನ್ಗೆ ಅನುಮತಿ ಪಡೆದಿದ್ದಾರೆ.
ಸದ್ಯ ಸೆಂಟ್ರಲ್ ಜೈಲಲ್ಲಿರೋ ಮಾಜಿ ಸಚಿವರಿಗೆ ಬೇಲ್ ಸಿಕ್ಕಿದರಷ್ಟೇಪರಪ್ಪನ ಅಗ್ರಹಾರದಿಂದ ರಿಲೀಸ್ ಆಗಲಿದ್ದಾರೆ.ಮತ್ತೊಂದೆಡೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ತೀರ್ಪು ಸಹ ಇಂದೇ ಪ್ರಕಟವಾಗಲಿದ್ದು, ಅತ್ತ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೀವ್ರವಾಗಿ ಚಡಪಡಿಸುತ್ತಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿಯಿಂದಲೇ ಜಾಮೀನು ತೀರ್ಪಿಗೆ ಸಂಬಂಧಪಟ್ಟಂತೆ ರಾತ್ರಿಯಿಡಿ ನಿದ್ರೆಯಿಲ್ಲದೆ ಚಡಪಡಿಸಿರುವ ದರ್ಶನ್ ಇಂದು ಬೆಳಿಗ್ಗೆ ಉಪಹಾರವನ್ನು ಸೇವಿಸಿದೆ ಜೈಲುಸಿಬ್ಬಂದಿಯನ್ನು ಪದೇ ಪದೇ ಜಾಮೀನು ಅರ್ಜಿ ವಿಚಾರವಾಗಿ ಏನಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೈಲು ಸಿಬ್ಬಂದಿ ಮಾತ್ರ ತಮಗೇನು ತಿಳಿಯದು ಎಂಬ ಉತ್ತರ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.