ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಭೇಟಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಟಿ.ಜೆ.ಅಬ್ರಾಹಂ ಅವರು ಮುಡಾ ಕಮಿಷನರ್ ರಘುನಂದನ್ ಭೇಟಿ ಮಾಡಿದ್ದಾರೆ. ಟಿ.ಜೆ.ಅಬ್ರಾಹಂ ನಡೆ ಕುತೂಹಲ ಮೂಡಿಸಿದೆ.
ಇನ್ನು ಈ ವೇಳೆ ಮಾತನಾಡಿದ ಟಿ.ಜೆ.ಅಬ್ರಾಹಂ, ಶೆಟ್ಟರ್,BSY ಬಗ್ಗೆ ಆರೋಪ ಮಾಡಿದರೆ ಆಗ ನನ್ನದು ಸತ್ಯ. ಈಗ ಇವರ ಬಗ್ಗೆ ಮಾತಾಡಿದ್ದಕ್ಕೆ ಬ್ಲ್ಯಾಕ್ಮೇಲರ್ ಆಗಿದ್ದೇನೆ. ಜಾಲತಾಣದ ಟ್ರೋಲ್ ಪೇಜ್ಗಳಲ್ಲಿ ನನ್ನನ್ನು ಬೈಯ್ಯುತ್ತಿದ್ದಾರೆ.
ಇದು ಸಿದ್ದರಾಮಯ್ಯ ಸೋಲು ಒಪ್ಪಿಕೊಂಡ ರೀತಿ ಅನ್ನಿಸುತ್ತಿದೆ. 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಕೃಷಿ ಭೂಮಿ ಖರೀದಿಸಿದ್ದರು. ಅಲ್ಲಿ ಆಗ ಕೃಷಿ ಭೂಮಿ ಇತ್ತಾ ಎಂದು ಟಿ.ಜೆ.ಅಬ್ರಾಹಂ ಪ್ರಶ್ನೆ ಮಾಡಿದ್ದಾರೆ.