ತಿ.ನರಸೀಪುರ: ತಾಲ್ಲೂಕಿನ ಕುಪ್ಯ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಗವಿಸಿದ್ದಯ್ಯ, ಉಪಾಧ್ಯಕ್ಷೆಯಾಗಿ ಮಂಜುಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷೆ ಯಶೋಧ ಹಾಗೂ ಉಪಾಧ್ಯಕ್ಷೆ ಶಿವಮ್ಮ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗವಿಸಿದ್ದಯ್ಯ, ಸಮಾನ್ಯಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳ ಅವರಿಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣೆ ಸಭೆಯಲ್ಲಿ ಪಂಚಾಯಿತಿಯ 12 ಸದಸ್ಯರು ಭಾಗವಹಿಸಿದ್ದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಗವಿಸಿದ್ದಯ್ಯ(ಕೆಂಚ) ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿಯನ್ನು ವಿತರಿಸಿ ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿಯಾಗಿ ರೇಷ್ಮೇ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಗವಿಸಿದ್ದಯ್ಯ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿ ಪ್ರತಿನಿಧಿಸುವ ವರ್ಣ ವಿಧಾನಸಭಾ ಕ್ಷೇತ್ರದ ಕುಪ್ಯ ಗ್ರಾಮದಲ್ಲಿ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯಾಗುತ್ತಿದೆ. ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಹಿಂದುಳಿದಿರುವ ಗ್ರಾಮಗಳ ಅಭಿವೃದ್ಧಿಗೆ, ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆದ್ಯತೆ ನೀಡುತ್ತೇನೆ. ಸದಸ್ಯರೊಡನೆ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಯತಿಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅಭಿವೃದ್ಧಿಗೆ ಅನುದಾನವನ್ನ ತರುತ್ತೇವೆ ಎಂದರು.
ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಎಸ್.ರಾಘವೇಂದ್ರ(ರಘು), ಭಾಗ್ಯಮ್ಮ, ಸದಸ್ಯರಾದ ಎನ್.ಗೋವಿಂದ, ನಂದಿನಿ, ಕೆ.ಸಿ.ಪುಟ್ಟರಾಜು, ಪುಷ್ಪ, ಪಿ.ಪದ್ಮ, ಕರೋಹಟ್ಟಿ ಮಹದೇವಯ್ಯ, ಎಸ್.ಸಿ.ಗಣೇಶ್ ಸ್ವಾಮಿ, ದಲಿತ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ,ಡೈರಿ ಅಧ್ಯಕ್ಷ ಪ್ರಭಾಕರ್, ತಾ.ಪo ಮಾಜಿ ಅಧ್ಯಕ್ಷ ಅಂದಾನಿ, ನೀರು ಬಳಕೆದಾರರ ಸಂಘದ ಜೆ. ಮಹದೇವ್ ಸೇರಿದಂತೆ ಇತರರು ಇದ್ದರು.