ಬೆಂಗಳೂರು: ಸಂಸದರಾಗಿರುವ ಜಿ.ಕುಮಾರನಾಯಕ್ ಹಾಗೂ ಈ. ತುಕಾರಾಂ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಇಂದು ಮಧ್ಯಾಹ್ನ 3 ಘಂಟೆಗೆ ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಿರುವ ಬಿಜೆಪಿಯ ಆರ್.ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರು, ಬಳ್ಳಾರಿ ಸಂಸದರಾದ ಈ. ತುಕಾರಾಂ ವಾಲ್ಮೀಕಿ ನಿಗಮದ ಹಣ ದುರುಪಯೋಗಪಡಿಸಿಕೊಂಡು ಗೆದ್ದಿದ್ದಾರೆ.ಹೀಗಾಗಿ ಅವರ ಸಂಸದ ಸ್ಥಾನವನ್ನು ಆನರ್ಹಗೊಳಿಸಬೇಕು.ಇತ್ತ ರಾಯಚೂರು ಸಂಸದ ಜಿ. ಕುಮಾರ್ನಾಯಕ್ ಮುಡಾ ಅಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.
ನಿವೇಶನ ಹಂಚಿಕೆ ಸಂದರ್ಭದಲ್ಲಿ ಮುಂದೆ ನಿಂತು ಸಿಎಂ ಸಿದ್ಧರಾಮಯ್ಯರ ಕಡೆಗೆ ಕೆಲಸ ಮಾಡಿಕೊಟ್ಟಿದ್ದಾರೆ.ಐಎಎಸ್ ಅಧಿಕಾರಿಯಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆಈ ನಿಟ್ಟಿನಲ್ಲಿ ಜಿ. ಕುಮಾರ್ನಾಯಕ್ ಅವರ ಸಂಸದ ಸ್ಥಾನ ಆನರ್ಹಗೊಳಿಸಬೇಕೆಂದು ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.