ದೇವನಹಳ್ಳಿ: ಕೃಷಿಕ ಸಮಾಜದ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 15 ಜನ ನಿರ್ದೇಶಕರಿಗೆ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೆಶಕಿ ಸುಶೀಲಮ್ಮ ತಿಳಿಸಿದರು.
ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಎಸ್.ಪಿ.ಮುನಿರಾಜು ಮಾತನಾಡಿ ಎಲ್ಲಾ ನಿರ್ದೇಶಕರು ಪಕ್ಷಾತೀತವಾಗಿ ಆಯ್ಕೆಯಾಗಿದ್ದೇವೆ. ತಾಲೂಕಿನ ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಬಿತ್ತನೆ ಬೀಜ, ಉಪಕರಣ, ಆಧುನಿಕ ಬೇಸಾಯ ಮಾಡುವ ಉಪಕರಣ ಸೇರಿದಂತೆ ಅನೇಕ ಸವಲತ್ತುಗಳನ್ನು ಮಾಡಿಕೊಡುವ ದೃಷ್ಠಿಯಿಂದ ಹಿಂದಿನ ಎಲ್ಲಾ ನಿರ್ದೇಶಕರ ಸದಸ್ಯರ, ಸಮಹಮತದಿಂದ ಈ ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕೃಷಿಕ ಸಮಾಜದ ನಿರ್ದೇಶಕ ಎಚ್.ಎಂ.ರವಿಕುಮಾರ್ ಮಾತನಾಡಿ 2009 ರಿಂದ ಸುಮಾರು 15 ವರ್ಷಗಳಿಂದ ಯಾವುದೇ ಪಕ್ಷ ಬೇದವಿಲ್ಲದೆ ಕೃಷಿಕ ಸಮಾಜವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ, ಬೆಂ.ಗ್ರಾಮಾಂತರ ಜಿಲ್ಲೆಯಲ್ಲೇ ದೇವನಹಳ್ಳಿ ಕೃಷಿಕ ಸಮಾಜ ಉತ್ತಮವಾಗಿ ಹೊರಹೊಮ್ಮಿದೆ., ಜಿಲ್ಲಾಧ್ಯಕ್ಷರಾದ ಎಸ್.ಆರ್.ರವಿಕುಮಾರ್ ಅವರ ನೇತೃತ್ವದಲ್ಲಿ ರೈತರಿಗೆ ಅನುಕೂಲಕರ ಕೆಲಸ ನಿರ್ವಹಿಸುತ್ತಿದ್ದೇವೆ.
ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿಯೂ ರೈತ ಸಂಪರ್ಕ ಕೆಲಸಗಳನ್ನು ಮಾಡಲಿದ್ದೇವೆ, ಇದೇ ಡಿ.23ರಂದು ಪಟ್ಟಣದ ದೇವರಾಜು ಅರಸು ಭವನದಲ್ಲಿ ರೈತ ದಿನಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ, ಕಾರ್ಯಕ್ರಮದಲ್ಲಿ ಜಿಲಾ ಉಸ್ತುವಾರಿ ಸಚಿವರು ಅನೇಕ ಗಣ್ಯರು ಭಾಗವಹಿಸಲಿದ್ದಾರೆ, ತಾಲೂಕಿನ ಎಲ್ಲಾ ರೈತ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು
ದೇವನಹಳ್ಳಿ ತಾಲೂಕು ಕೃಷಿಕ ಸಮಾಜಕ್ಕೆ ಅವಿರೋಧ ಆಯ್ಕೆಯಾದ ನಿರ್ದೇಶಕರು :ಜಿಲ್ಲಾ ಅಧ್ಯಕ್ಷ ಎಸ್.ಆರ್.ರವಿಕುಮಾರ್. ಕೆ.ಶ್ರೀನಿವಾಸ್ಗೌಡ, ಎಸ್.ಪಿ.ಮುನಿರಾಜು, ಕೆ.ಎನ್.ಕೃಷ್ಣಮೂರ್ತಿ, ಎಚ್.ಎಮ್.ರವಿಕುಮಾರ್, ಪಿ.ಮಾರೇಗೌಡ, ಸಿ.ಪುರುಷೋತ್ತಮ್, ಎಂ. ದೇವರಾಜ್, ಪುರುಷೋತ್ತಮ್ಕುಮಾರ್, ರಮೇಶ್, ಎನ್. ಎಸ್. ಸುರೇಶ್, ಆರ್.ವಿ ಕೊಂಡಪ್ಪ, ಮುನಿರಾಜು, ಮುನಿರಾಜು (ಬರ್ಮಾ) ಡಿ.ಎಸ್, ಟಿ.ಮಂಜುನಾಥ್, ಈ ಸಮಯದಲ್ಲಿ ಹಿತ್ತರಹಳ್ಳಿ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.