ದೇವನಹಳ್ಳಿ: ತಾಲೂಕಿನ ಕೃಷಿಕ ಸಮಾಜದ ನಿರ್ದೇಶಕರ ಸ್ಥಾನಕ್ಕೆ 15 ನಾಮಪತ್ರಗಳು ಸಲ್ಲಿಕೆ ಆದ ಕಾರಣ ನಿರ್ದೇಶಕರ ಸ್ಥಾನವೂ ಅವಿರೋಧವಾಗಿ ಆಯ್ಕೆಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆ ಆಗದ ಕಾರಣ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಬೂದಿಗೆರೆಯ ಕೆ.ಶ್ರೀನಿವಾಸ್ ಗೌಡ, ಉಪಾಧ್ಯಕ್ಷರಾಗಿ ಹ್ಯಾಡಳದ ಪಿ. ಮಾರೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಬಿದಲೂರು ಎಸ್.ಪಿ.ಮುನಿರಾಜು, ಖಜಾಂಚಿ ಮಂಡಿಬೆಲೆ ಎಂ.ದೇವರಾಜು, ಜಿಲ್ಲಾ ಪ್ರತಿನಿಧಿಯಾಗಿ ಆರ್. ರವಿಕುಮಾರ್ ರವರು ಆಯ್ಕೆಯಾಗಿದ್ದಾರೆ ಎಂದು ಕೃಷಿಕ ಸಮಾಜದ ಚುನಾವಣಾ ಅಧಿಕಾರಿ ಸುಶೀಲಮ್ಮ ಘೋಷಿಸಿದರು.
ಪಟ್ಟಣದ ತಾಲೂಕು ಕೃಷಿಕ ಸಮಾಜದ ಕಚೇರಿಯ ಆವರಣದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಇನ್ನುಳಿದ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದವರನ್ನು ತಾಲೂಕಿನ ಹಲವಾರು ಮುಖಂಡರು ಅಭಿನಂದಿಸಿದರು.ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾತನಾಡಿ ಎಸ್.ಆರ್ .ರವಿಕುಮಾರ್ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದೇವೆ,
ಈ ಹಿಂದೆ ಕೃಷಿಕ ಸಮಾಜದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ, ಕೃಷಿಕ ಸಮಾಜ ಉಪ ನಿರ್ದೇಶಕರಾದ ಸುಶೀಲಮ್ಮ ರವರಿಗೂ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಧನ್ಯವಾದಗಳು ತಿಳಿಸಿ. ಮುಂದಿನ ದಿನಗಳಲ್ಲಿ ಕೃಷಿಕ ಸಮಾಜದಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ರೈತರಿಗೆ ನೇರವಾಗಿ ತಲುಪಿಸುವಂತೆ ಕಾರ್ಯಪ್ರವೃತ್ತರಾಗುತ್ತೇವೆ ಎಂದರು.
ಕೃಷಿಕ ಸಮಾಜದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಪಿ.ಮುನಿರಾಜು ಮಾತನಾಡಿ ನೂತನವಾಗಿ ಆಯ್ಕೆಯಾದ 15 ನಿರ್ದೇಶಕರಗಳ ಸಹಮತದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇನ್ನುಳಿದ ಸ್ಥನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾದ ಎಲ್ಲರಿಗೂ ಅಭಿನಂದನೆಗಳು ತಿಳಿಸಿ ಕೃಷಿಕ ಸಮಾಜದಲ್ಲಿ ಪಕ್ಷಾತೀತವಾಗಿ ನಿರ್ದೇಶಕರ ಆಯ್ಕೆಯಾಗಿದ್ದಾರೆ ಹಾಗಾಗಿ ಎಲ್ಲರಿಗೂ ಸಮಾನವಕಾಶ ಕಲ್ಪಿಸಿ ರೈತಪರ ಯೋಜನೆಗಳನ್ನು ಜಾರಿಯಾಗುವಂತೆ ಕೃಷಿಕ ಸಮಾಜದ ಅಭಿವೃದ್ಧಿ ಉತ್ತಮವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿಕ ಸಮಾಜದ ನಿರ್ದೇಶಕರುಗಳಾದ ಕಗ್ಗಲಹಳ್ಳಿ ಕೆ.ಎನ್ ಕೃಷ್ಣಮೂರ್ತಿ, ಹೊಸೂರು ಎಚ್. ಎಮ್ ರವಿಕುಮಾರ್, ರಾಮನಾಥಪುರದ ಸಿ. ಪುರುಷೋತ್ತಮ್, ಮಂಡಿಬೆಲೆಯ ಎಂ. ದೇವರಾಜ್, ಬೈಚಾಪುರದ ಪುರುಷೋತ್ತಮ್ ಕುಮಾರ್, ಬಾಲೆಪುರ ರಮೇಶ್, ನರಗನಹಳ್ಳಿ ಎನ್.ಎಸ್. ಸುರೇಶ್, ರಾಮನಹಳ್ಳಿ ಆರ್.ವಿ ಕೊಂಡಪ್ಪ, ಕೋರಮಂಗಲದ ಮುನಿರಾಜು, ಯಲಹಂಕ ಬೀದಿಯ ಮುನಿರಾಜು ಬರ್ಮ ಡಿ.ಎಸ್, ಮರಳು ಬಾಗಿಲು ಟಿ .ಮಂಜುನಾಥ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಹಿತ್ತರಹಳ್ಳಿ ರಮೇಶ್ ಸೇರಿದಂತೆ ತಾಲೂಕಿನ ಹಲವಾರು ಮುಖಂಡರು ಉಪಸ್ಥಿತರಿದ್ದರು.