ಬೆಂಗಳೂರು: ಕರ್ನಾಟಕ ಕೃಷಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಕುರಿತ ಪರಿಸರ ಅರಿವು ಸಮಾವೇಶ ಸಿಎಸ್ ಐ ಕಂಪೌಡ್ ನ ಸೌಹರ್ದ ಸಭಾಂಗಣದಲ್ಲಿ ನಡೆಯಿತು.ಕರ್ನಾಟಕ ಕೃಷಿ ಮತ್ತು ಆಹಾರ ಭದ್ರತೆ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು ಕುರಿತು ಡಾ.ಮದುರಾ ಸ್ವಾಮಿನಾಥನ್ ಮಾತನಾಡಿದರು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ.ಮಹೇಶ ಮತ್ತು ಹಿರಿಯ ಸಮಾಲೋಚಕ ಡಾ.ಸರಿತಾ ಕರ್ನಾಟಕದ ಕೃಷಿಯ ಮೇಲೆ ಹವಮಾನ ಬದಲಾವಣೆಯ ಪರಿಣಾಮಗಳ ಉಪಶಮನ ಮಾಡಲು, ತಾಳಿಕೊಳ್ಳಲು ಕಾರ್ಯ ಯೋಜನೆ ಕುರಿತು ಪ್ರಬಂದ ಮಂಡಿಸಿದರು.
ಕರ್ನಾಟಕದ ಕೃಷಿ ಮತ್ತು ಆಹಾರ ಭದ್ರತೆಯ ಮೇಲೆ ಹವಮಾನ ಬದಲಾವಣೆಯ ಪರಿಣಾಮ ಎದುರಿಸುವುದು ಹೇಗೆ, ಸರ್ಕಾರದ ಕಾರ್ಯ ಯೋಜನೆ ವಿಮರ್ಶೆ,ಕಾರ್ಯ ಸಾಧ್ಯತೆ ಸೂಚನೆಗಳು ಕುರಿತು ಸಂವಾದ ಗೋಷ್ಠಿ ನಡೆಯಿತು.
ಜನಶಿಕ್ಷಣ ಟ್ರಸ್ಟ್ ನ ಡಾ.ಕೆ.ಎಸ್.ವಿಮಲಾ ಮಾತನಾಡಿ, ಇಂದು ಕೃಷಿ ಮತ್ತು ಆಹಾರ ಭದ್ರತೆಯ ಮೇಲೆ ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮಗಳ ಕುರಿತು ಚರ್ಚೆ ನಡೆಸಿ ಸರ್ಕಾರ ಈ ಬಗ್ಗೆ ನೀತಿ ನಿರೂಪಿಸಿ ಇದನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂವಾದದಲ್ಲಿ ಸಿ.ಯತಿರಾಜು, ಡಾ.ಸಿದ್ಧನ ಗೌಡ ಪಾಟೀಲ, ಜನಶಿಕ್ಷಣ ಟ್ರಸ್ಟ್ ನ ಕೆ.ಎಸ್.ವಿಮಲಾ ಮತ್ತಿತರರು ಭಾಗವಹಿಸಿದ್ದರು.