ಒಟ್ಟಾವ: ಭಾರತದೊಂದಿಗೆ ರಾಜತಾಂತ್ರಿಕ ಸಂಬAಧ ಹದಗೆಟ್ಟಿರುವ ಬೆನ್ನಲ್ಲೇ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿದ್ದ `ಜನಪ್ರಿಯ ವೀಸಾ ಯೋಜನೆ’ಯನ್ನು ಕೆನಡಾ ಅಂತ್ಯಗೊಳಿಸಿದೆ. ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ತೆರಳುತ್ತಿದ್ದ ಭಾರತದ ವಿದ್ಯಾರ್ಥಿಗಳಿಗೆ ಇದರಿಂದ ಸಂಕಷ್ಟ ಎದುರಾಗಿದೆ.
ವಿದ್ಯಾರ್ಥಿಗಳಿಗೆ ವೇಗವಾಗಿ ವೀಸಾ ದೊರಕಿಸಿಕೊಡುವುದಕ್ಕಾಗಿ ೨೦೧೮ರಲ್ಲಿ ಈ ಯೋಜನೆಯನ್ನು ಕೆನಡಾ ಜಾರಿ ಮಾಡಿತ್ತು. ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ, ಹೆಚ್ಚಿನ ಪ್ರಮಾಣದ ವೀಸಾಗಳಿಗೆ ಅನುಮತಿ ದೊರಕುತ್ತಿತ್ತು. ಅಲ್ಲದೇ ಶೀಘ್ರವಾಗಿ ವೀಸಾ ವಿತರಣೆ ಪ್ರಕ್ರಿಯೆ ನಡೆಯು ತ್ತಿತ್ತು. ಈಗ ಇದನ್ನು ರದ್ದು ಮಾಡಿರುವುದರಿಂದ ಭಾರತ ಸೇರಿದಂತೆ ೧೪ ರಾಷ್ಟçಗಳ ವಿದ್ಯಾರ್ಥಿಗಳು ಸುದೀರ್ಘ ವೀಸಾ ಪ್ರಕ್ರಿಯೆಗೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗ ಇದರ ರದ್ದು ಏಕೆ?: ಕೆನಡಾದಲ್ಲಿ ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಮನೆ ಮತ್ತು ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಂಡಿರುವುದಾಗಿ ಕೆನಡಾ ಹೇಳಿದೆ. ಹೊರದೇಶದವರ ಸಂಖ್ಯೆ ಹೆಚ್ಚಿದ್ದರಿಂದ , ಜೀವನ ನಿರ್ವಹಣ ವೆಚ್ಚ ಮತ್ತು ಆರೋಗ್ಯ ಸೇವೆಗಳು ತುಟ್ಟಿಯಾಗಿವೆ ಎಂದು ಜನ ಆರೋಪಿಸಿದ್ದರು.